ಗ್ರಾಮೀಣ ವಿದ್ಯಾರ್ಥಿನಿಯರ ಹಾಸ್ಟನ್ ನಿರ್ಮಾಣ ಸಮಾಜದ ಏಳಿಗೆಯೇ ನಮ್ಮ ಗುರಿ: ಚಾನಾಳ್ ಶೇಖರ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,19- ವೀರಶೈವ ಮಹಾಸಭಾಗೆ ಸರ್ಕಾರದಿಂದ ನಿವೇಶನ ಪಡದು ಅಲ್ಲಿ   ಬಾಲಕಿಯರ ವಸತಿ ನಿಲಯ ಆರಂಭಿಸಲು ಉದ್ದೇಶಿಸಿದೆಂದು ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ಅಧ್ಯಕ್ಷ  ಸ್ಥಾನದ ಆಕಾಂಕ್ಷಿ ಚಾನಾಳ್ ಶೇಖರ್ ಹೇಳಿದ್ದಾರೆ.
ಅವರು ಇಂದು ಹಾನಗಲ್ಲು ಕುಮಾರೇಶ್ವರ  ತಂಡದ ಸದಸ್ಯರ ಜೊತೆಯಾಗಿ ಕಪ್ಪಗಲ್ಲು ಗ್ರಾಮದಲ್ಲಿ ಸಮಾಜದ ಮುಖಂಡರು ಮತ್ತು ಮತದಾರರ ಸಭೆಯಲ್ಲಿ ಮಾತನಾಡುತ್ತಿದ್ದರು.
ಈ ಹಿಂದೆ 2021 ರ ಮುನ್ನ ಮಹಾಸಭಾ ಕೇವಲ ಕೆಲವರ ಹಿಡಿತದಲ್ಲಿತ್ತು ಅದನ್ನು ಮುಕ್ತಗೊಳಿಸಿ ಈಗ 7 ಸಾವಿರಕ್ಕೂ ಹೆಚ್ಚು ಸದಸ್ಯರನ್ನಾಗಿ ಮಾಡಿದೆ. ಸಭಾಗೆ ಒಂದು ಸ್ವಮನತ ನಿವೇಶನ ಪಡೆಯುವ ಪ್ರಯತ್ನ‌ ಮಾಡಿದೆ ಅಲ್ಲಿ ಗ್ರಾಮೀಣ ವಿದ್ಯಾರ್ಥಿನಿಯರ ವಸತಿ ನಿಲಯ ನಿರಗಮಿಸುವ ಉದ್ದೇಶ ಹೊಂದಿದೆ ಇದನ್ನು ಸಾಕಾರಗೊಳಿಸಲು ನೀವೆಲ್ಲ‌ನಮ್ಮ‌ತಂಡವನ್ನು ಆಯ್ಕೆ ಮಾಡಲು ಮತ ನೀಡಬೇಕೆಂದು ಕೋರಿದರು.
ನಾಡಿದ್ದು ನಡೆಯುವ  ಮತದಾನಕ್ಕೆ ಎಲ್ಲರೂ ಬಂದು ಮತದಾನ‌ಮಾಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿದ್ದಲಿಂಗ ಸ್ವಾಮಿ, ಬಸವರಾಜ್ ತೆಕ್ಕಲಕೋಟೆ, ಕೆ ಪಿ ರುದ್ರಪ್ಪ, ಏ ಮಹದೇವಪ್ಪ ಹಳೆ ಮನೆ ಸಿದ್ದರಾಮಯ್ಯ, ಹಳೆಗೌಡ ಬಸಪ್ಪ ಕೆ ಮಲ್ಲಿಕಾರ್ಜುನ ಸ್ವಾಮಿ, ನಾಗೇಸ್ವಾಮಿ ಬಿ ಕಟ್ಟೆಗೌಡ, ದಮ್ಮೂರ್ ಲೋಕಪ್ಪ,ಮರಿಮಲ್ಲಪ್ಪನವರ ಸಿದ್ಧರಾಮಪ್ಪ, ಬಿ ಈಶ್ವರಗೌಡ, ಕೆಜಿ ಶಿವಪ್ಪಗೌಡ ಇನ್ನಿತರ ಹಿರಿಯ ಮುಖಂಡರು ಸಮಾಜದ ಬಂಧುಗಳು ಉಪಸ್ಥಿತರಿದ್ದರು.
One attachment • Scanned by Gmail