ಸಿಲ್ವರ್ ಸ್ಟಾರ್ ರೋಟರಿ ವತಿಯಿಂದ ಸಂಸದ ಸಾಗರ್ ಖಂಡ್ರೆಗೆ ಸತ್ಕಾರ
ಬೀದರ: ಜು.19: ನಗರದ ಎಸ.ಆರ್.ಎಸ್ ಫಂಕ್ಷನ್ ಹಾಲ್‍ನಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ತಂಡವು ಬೀದರ್ ಜಿಲ್ಲೆಯ ನೂತನ ಸಂಸದ ಸಾಗರ್ ಖಂಡ್ರೆ ಯವರಿಗೆ ಅಭಿನಂದನಾ ಸಮಾರಂಭ ನಿಮಿತ್ತವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸ್ವಾಗತ ಭಾಷಣವನ್ನು ಮಾಡಿದ ಯುವ ಉದ್ಯಮಿ ಹಾಗೂ ಕ್ಲಬ್ ನ ಉಪಾಧ್ಯಕ್ಷ ಆದೀಶ್ ರಾ ವಾಲಿ ಮಾತನಾಡಿ ನಮ್ಮ ಜಿಲ್ಲೆಯ ನೂತನ ಸಂಸದರಾಗಿರುವ ಸಾಗರ್ ಖಂಡ್ರೆರವರು ರಾಜ್ಯದ ಇತಿಹಾಸದಲ್ಲಿಯೇ ಅತಿ ಕಿರಿಯ ಸಂಸದರಾಗಿ ಆಯ್ಕೆಯಾಗಿರುವುದು ಜಿಲ್ಲೆಯ ಕೀರ್ತಿ ಹೆಚ್ಚಿಸಿದೆ. ಯುವನಾಯಕ ಸಾಗರ್ ಕಂಡ್ರೆ ಮುಂದಿನ್ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆಯನ್ನು ಕೊಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಲಬ್ ನ ಸಲಹೆಗಾರರಾಗಿರುವಂತ ಬಸವರಾಜ್ ಧನ್ನುರ್ ಅವರು ಮಾತನಾಡಿ ರೋಟರಿ ಕ್ಲಬ್ ಒಂದು ಸೇವಾ ಸಂಸ್ಥೆಯಾಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಸೇವಾ ಕಾರ್ಯಕ್ರಮಗಳನ್ನ ಮಾಡಿದೆ ಪೆÇೀಲಿಯೋ ಮುಕ್ತ ವಿಶ್ವವಾಗುವಲ್ಲಿ ಮಹತ್ತರ ಕೊಡುಗೆ ನೀಡಿದೆ ಎಂದರು. ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಹಲವು ಸಮಾರಂಭಗಳಿಗೆ ಒಳ್ಳೆಯ ಮೀಟಿಂಗ್ ಹಾಲ್ ಕೊರತೆಯಿದ್ದು ನಮ್ಮ ರೋಟರಿ ಕ್ಲಬ್ ನ ಸದಸ್ಯರು ಸೇರಿ ಒಂದು ನೂತನ ರೋಟರಿ ಭವನ ನಿರ್ಮಿಸುವ ಗುರಿಯನ್ನು ಹೊಂದಿದ್ದೇವೆ. ಅದಕ್ಕಾಗಿ ಒಂದು ಸಿಎ ಸೈಟು ಕೊಡಿಸಲು ಸರ್ಕಾರ ಮಟ್ಟದಲ್ಲಿ ತಾವು ಸಹಾಯ ಮಾಡಬೇಕು ಎಂದು ಸಂಸದ ಸಾಗರ್ ಖಂಡ್ರೆಗೆ ಮನವಿ ಮಾಡಿದ್ರು.
ಕೊನೆದಾಗಿ ಅಧ್ಯಕ್ಷತೆಯ ಭಾಷಣವನ್ನು ಮಾಡಿದಂತಹ ಸಾಗರ ಖಂಡ್ರೆಯವರು ಈ ಕಾರ್ಯಕ್ರಮಕ್ಕೆ ಬರುವ ಮೊದಲು ನಾನು ರೋಟರಿ ಕ್ಲಬ್ ನ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೇನೆ. ರೋಟರಿ ಕ್ಲಬ್ ಈಗಾಗಲೇ ವಿಶ್ವದಾದ್ಯಂತ ಒಳ್ಳೆಯ ರೀತಿ ಕೆಲಸಗಳು ಮಾಡುತ್ತಿದ್ದು ಬೀದರ್ನಲ್ಲಿಯೂ ಕೂಡ ಈ ಒಂದು ಉತ್ತಮ ಕಾರ್ಯಗಳನ್ನು ಮಾಡಬೇಕು ಮತ್ತು ನಿಮ್ಮ ಕಾರ್ಯಗಳಿಗೆ ನಾನು ಕೂಡ ಕೈಜೋಡಿಸುವೆ, ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಬೀದರ ನಲ್ಲಿ ಇನ್ನಷ್ಟು ಕಾರ್ಯಗಳು ನಡೆಯಬೇಕಾಗಿದೆ ಎಂದು ಸಲಹೆಯನ್ನ ನೀಡಿದರು.
ಈ ಕಾರ್ಯಕ್ರಮವನ್ನು ಅಭಿಷೇಕ್ ಚಿಂತಾಮಣಿ ನಿರೂಪಿಸಿದ್ದು ಜಂಟಿ ಕಾರ್ಯದರ್ಶಿ ಆಗಿರುವಂತ ಸ್ಪೂರ್ತಿ ಬಸವರಾಜ ಧನ್ನೂರ್ ಅವರು ರೋಟರಿ ಕ್ಲಬ್ ಕಾರ್ಯವೈಖರಿ,ಕ್ಲಬ್ ರಿಪೆÇೀರ್ಟ್ ಮತ್ತು ಸಾಧನೆಗಳನ್ನು ವೇದಿಕೆಯಲ್ಲಿ ವಿವರಿಸಿದ್ದು, ಕ್ಲಬ್ ನ ಕಾರ್ಯದರ್ಶಿ ಪೂಜಾ ಜಾರ್ಜ್ ಅವರು ವಂದನಾರ್ಪಣೆ ತಿಳಿಸಿದರು.
ಇದೆ ವೇಳೆ ಕ್ಲಬ್ ನ ಅಧ್ಯಕ್ಷರಾಗಿರುವಂತಹ ಸರ್ದಾರ್ ಪುನೀತ್ ಸಿಂಗ್ ಅವರು ಸಾಗರ ಖಂಡ್ರೆ ಅವರಿಗೆ ಆಹ್ವಾನದ ಮೂಲಕ ಕ್ಲಬ್ ಗೆ ಸೇರಲು ಮನವಿ ಮಾಡಿದ್ದು,ಅವರ ಮನವಿ ಮೇರೆಗೆ ಗೌರವಾನ್ವಿತ ಸದಸ್ಯರಾಗಿ ಸೇರಿಕೊಂಡ್ರು.
ಈ ಸಂದರ್ಭದಲ್ಲಿ ಕ್ಲಬ್ ನ ಖಜಾಂಚಿ ಅಮಾಯ್ ಸಿಂಧೋಲ್,ನಿರ್ದೇಶಕರಾದ ಗುರು ಸಿಂಧೋಲ್, ಡಾ.ಸಂಗಮೇಶ ವಡಗಾವೆ, ಸಹನಾ ಪಾಟೀಲ್, ಲವನಿತ ಸಿಂಗ್,ಭಾವೇಶ್ ಪಟೇಲ್,ಅಭಿಷೇಕ ಚಿಂತಾಮಣಿ,ಸದಸ್ಯರಾದ ಡಾ.ಸಚಿನ್ ಗುದಗೆ, ಅನಂದ ಕೋಟರ್ಕಿ,ಕಿರಣ್ ಸ್ಯಾಮೂವೆಲ್, ರಂಚನ್ ರೇಜೇತಲ್, ನವೀನ್ ಆಲಮಾಜೆ,ಬಸವ ಪ್ರಸಾದ್, ಕೃಷ್ಣ ಪಸರ್ಗೆ,ಅಮರೇಶ್ ಅಂಬಿಸಾಗೆ,ಅಖಿಲೇಶ್ ಬಿರಾದಾರ,ಹರ್ಷತ್ ಪಟೇಲ್,ವಿನಾಯಕ್ ವಗಪಲ್ಲಿ,ಸಂತೋಷ್ ಸಿಂಧೋಳ್,ಪ್ರಸನ್ನ ಸಿಂಧೋಳ್,ನವೀನ್ ಗೋಯಲ್,ಅನಂದ ಕುಲಕರ್ಣಿ,ಅರುಣ್ ಅಟಲ್, ಫಾರ್ಮಾನ್,ಗುರುರಾಜ್ ಮೈಲಾಪುರ,ಸಂಗಮೇಶ ಹತ್ತಿ,ವೀರೇಶ್ ಜೀರಿಗೆ,ಅಮೋಲ್ ಜಾಧವ್,ಸುಮಿತ್ರಾ ಗೋಯಲ್,ನಿಖಿಲ್ ಖಂಡ್ರೆ, ಡಾ.ವೈಭವ ಬದಬದೆ,ಮಹೇಶ್ ತಾಡಂಪಲ್ಲಿ,ಮನೀಶ್ ಸಿಂದೋಲ್, ಸೇರಿದಂತೆ ಹಲವರಿದ್ದರು.