ಸಂಘಟನೆಯ ಮೂಲಕ ವೀರಶೈವ ಸಮಾಜಕ್ಕೆ ನ್ಯಾಯ ಒದಗಿಸುವೆ : ಕೊಟ್ರೇಶ್ ಶೆಟ್ಟರ್
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜು.19- ತಾಲೂಕ ವೀರಶೈವ ಲಿಂಗಾಯಿತ ಸಮಾಜವನ್ನು ಸಂಘಟನೆ ಮಾಡುವ ಮೂಲಕ ಸಮಾಜದ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಬೇಕೆಂಬ ಮಹಾದಾಸೆ ಇದೆ  ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕೊಟ್ರೇಶ ಶೆಟ್ಟರ್ ಹೇಳಿದರು .
 ಪಟ್ಟಣದಲ್ಲಿ ಗುರುವಾರ ಪ್ರಚಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ 20 ವರ್ಷಗಳಿಂದ ಸಮಾಜಕ್ಕಾಗಿ ವೀರಶೈವ ವೇದಿಕೆ ಮೂಲಕ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುವೆ. ಸಮಾಜ ನನಗೆ ಒಂದು ಜವಾಬ್ದಾರಿ ನೀಡಿದರೆ ಇನ್ನು ಉತ್ತಮವಾಗಿ ಸೇವೆ ಮಾಡಲು ಅನುಕೂಲವಾಗುತ್ತದೆ. ತಾಲೂಕ ಕೇಂದ್ರದಲ್ಲಿ ವೀರಶೈವ ಮಹಾಸಭಾ ಕಚೇರಿ ಆರಂಭಿಸಿ ವೀರಶೈವ ಲಿಂಗಾಯಿತ ಸಮುದಾಯದ 33 ಜಾತಿಗಳಿಂದಲೂ ಸದಸ್ಯತ್ವ  ಅಭಿಯಾನ ಹಮ್ಮಿಕೊಳ್ಳಲಾಗುವುದು. ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ, ಜೊತೆಗೆ ಸಹಾಯ ಮತ್ತು ಕೌಶಲ್ಯ ತರಬೇತಿ ಸಹಕಾರ, ಕಾನೂನು ಘಟಕ ಸ್ಥಾಪಿಸಲಾಗುವುದು. ಮಠಾಧೀಶರ ನೇತೃತ್ವದಲ್ಲಿ ಚಿಂತನ ಮಂಥನ ದಾಸೋಹ ಕಾಯಕ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು
 ತಾಲೂಕಿನಲ್ಲಿ 400ಕ್ಕೂ ಹೆಚ್ಚು ಮತದಾರರಿದ್ದು ಅದರಲ್ಲಿ ಕೆಲವರು ಮರಣ ಹೊಂದಿದ್ದಾರೆ. ಜುಲೈ 21ರಂದು ಚುನಾವಣೆ ನಡೆಯಲಿದ್ದು. ಪತ್ರಿ ಬಸವೇಶ್ವರ ದೇವಸ್ಥಾನದಲ್ಲಿ ಮತಗಟ್ಟೆ ಸ್ಥಾಪಿಸಲಾಗುವುದು. ಮತದಾರರು ನನ್ನನ್ನು ಬೆಂಬಲಿಸುವ ಮೂಲಕ ಆಯ್ಕೆ ಮಾಡಬೇಕು ಎಂದರು ತಿಳಿಸಿದರು.
 ಈ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಸಮಾಜದ ಮುಖಂಡರಾದ ಹುಡೇದ್ ಗುರು ಬಸವರಾಜ್, ಭಾವಿ ರವೀಂದ್ರ ನೀಲಕಂಠಪ್ಪ ಮಹೇಶ್ ಇದ್ದರು