ವಕೀಲರ ಸಂಘದ ಚುನಾವಣೆಇಬ್ಬರಿಂದ ನಾಮಪತ್ರ ಸಲ್ಲಿಕೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,19- ಮುಂದಿನ ತಿಂಗಳ 2 ರಂದು ನಡೆಯುವ ಇಲ್ಲಿನ  ಬಳ್ಳಾರಿ ವಕೀಲರ ಸಂಘಕ್ಕೆ ನಾಮ ಪತ್ರ ಸಲ್ಲುಸಲು ನಾಳೆ ಕೊನೆಯ ದಿನಾಂಕವಾಗಿದ್ದು ಇಂದು ಮಧ್ಯಾಹ್ನ 1 ಗಂಟೆವರೆಗೆ ಕೇವಲ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಬಹುತೇಖರು ನಾಳೆ  ಸಲ್ಲಿಸುವ ಸಾಧ್ಯತೆ ಇದೆ.
ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ,  ಜಂಟಿ ಕಾರ್ಯದರ್ಶಿ (ಮಹಿಳೆಗೆ), ಖಜಾಂಚಿ ಹಾಗು 12 ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಗಳು ಇದರಲ್ಲಿ ಎರೆಡು ಮಹಿಳೆಯರಿಗೆ ಮೀಸಲು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ನಿನ್ನೆಯ ದಿನ ರಾಮಣ್ಣ ಅವರು ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಕ್ಕೆ, ಇಂದು ಷಣ್ಮುಖ ಅವರು ಉಪಾಧ್ಯಕ್ಷ ಸ್ಥಾನಕ್ಕೆ  ನಾಮಪತ್ರ ಸಲ್ಲಿಸಿದ್ದಾರೆಂದು
ಚುನಾವಣಾಧಿಕಾರಿ ವೆಂಕಟೇಶ್ವರ ರೆಡ್ಡಿ ಸಂಜೆವಾಣಿಗೆ ತಿಳಿಸಿದ್ದಾರೆ.
ನಾಳೆ   ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ವರೆಗೆ ಮಾತ್ರ ನಾಮಪತ್ರ  ಸಲ್ಕಿಸಬಹುದಾಗಿದೆ.  ನಾಡಿದ್ದು ಜ.21 ರಂದು ನಾಮಪತ್ರಗಳ ಪರಿಶೀಲನೆ, ಜು.22 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯದಿನವಾಗಿದೆ. ಅಗತ್ಯ ಬಿದ್ದರೆ ಅ.2 ರಂದು ಮತದಾನ ಬೆಳಿಗ್ಗೆ 9 ರಿಂದ ಸಂಜೆ 5 ರ ವರೆಗೆ ನಡೆಯಲಿದೆ. ಮರುದಿನ‌ ಅ.3 ರಂದು ಮತಗಳ ಎಣಿಕೆ ನಡೆಯಲಿದೆ.
ಸಭೆ:
ಎರೆಡು ಗುಂಪುಗಳಿಂದ ಅಭ್ಯರ್ಥಿಗಳ ಆಯ್ಕೆ ಕಸರತ್ತಿನ ಸಭೆಗಳು ನಡೆದಿದೆ.
ಒಮ್ಮತದ ಅಭ್ಯರ್ಥಿಗಳ ಆಯ್ಕೆಗೆ ಎಲ್ಲಾ ರೀತಿಯ ಪ್ರಯತ್ನ ನಡೆದಿದೆ. ಹಿರಿಯ ವಕೀಲರಲ್ಲಿ ಸ್ಪರ್ಧೆಗೆ ಆಸಕ್ತಿ ಕಂಡು ಬಂದಿಲ್ಲ. ಯುವಕರು ಗುಂಪುಗಳಾಗಿ ಚರ್ಚೆ ಮಾಡುತ್ತಿದ್ದಾರೆ.