ಸಮಾಜದ ಉದ್ಧಾರ  ಸ್ವಾಭಿಮಾನ ಕಾಪಾಡುವ ಅಭ್ಯರ್ಥಿಗಳಿಗೆ ಮತ ನೀಡಿ: ಅಲ್ಲಂ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ;ಜು,19-  ವೀರಶೈವ ಲಿಂಗಾಯತ ಸಮಾಜದ ಉದ್ಧಾರ ಹಾಗೂ ಸ್ವಾಭಿಮಾನ ಕಾಪಾಡುವಂತಹ  ಅಭ್ಯರ್ಥಿಗಳಿಗೆ ತಮ್ಮ ಮತವನ್ನು ಹಾಕಬೇಕೆಂದು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ ಮತ್ತು  ಅಲ್ಲಂ ಕುಟುಂಬದವರು ವಿನಂತಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು. ನಾಡಿದ್ದು ಜು 21 ರಂದುಙಡೆಯುವ  ಅಖಿಲ ಭಾರತ ವೀರಶೈವ ಮಹಾಸಭಾ  ಬಳ್ಳಾರಿ ಜಿಲ್ಲಾ ಘಟಕ ಅಧ್ಯಕ್ಷ ಮತ್ತು  ಕಾರ್ಯಕಾರಿ ಸಮಿತಿ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಈ ಚುನಾವಣೆಯ ಕಣದಲ್ಲಿ ಸಮಾಜದ 60 ಕ್ಕೂ ಹೆಚ್ಚು ಜನ  ಸ್ಪರ್ಧಿಸಿದ್ದಾರೆ. ಸ್ಪರ್ಥಿಸಿದ ಅಭ್ಯರ್ಥಿಗಳೆಲ್ಲರೂ ತಮ್ಮದೇ ಚಾವು ಮೂಡಿಸುವುದರೊಂದಿಗೆ ಸಮಾಜದ ಸೇವೆ ಮಾಡಲು ಉತ್ಸುಕರಾಗಿರುವುದು ಸಂತೋಷದ ಸಂಗತಿಯಾಗಿದೆ. ನಮ್ಮ ವೀರಶೈವ ಸಮಾಜ ಅತೀ ಸೂಕ್ಷ್ಮ ಸಮಾಜ, ಈ ಸಮಾಜದ ಗೌರವ, ಸರ್ಕಾರದಿಂದ ಲಭಿಸುವ 371ಜೆ ಸೌಲಭ್ಯ,  ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಸೌಲಭ್ಯಗಳು, ಸಮುದಾಯದ ಬಡವರ ಕಲ್ಯಾಣಕ್ಕಾಗಿ, ಮೀಸಲಾತಿ ಹೋರಾಟ ಸೇರಿದಂತೆ  ಒಟ್ಟಾರೆ ಸಮಾಜದ ಏಳೆಗಾಗಿ, ತಮ್ಮದೇ ಆದ ಅನಿಸಿಕೆ ಮತ್ತು ಅನುಭವದ ಆಧಾರದ ಮೇಲೆ ಭೇದಭಾವ ಇಲ್ಲದೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವರ ಬಗ್ಗೆ ಚಿಂತನೆ ಮಾಡಿ ಮತ ನೀಡಬೇಕು. ನಾವು ಇಂತಹವರನ್ನೇ ಬೆಂಬಲಿಸುತ್ತೇವೆ ಎಂಬ ಹೇಳಿಕೆಗಳಿಗೆ ಆಸ್ಪದ ಬೇಡ. ಸಮಾಜದ ಏಳಿಗೆ ಮುಖ್ಯ ಅಂತಹವರಿಗೆಲ್ಲ ನಮ್ಮ‌ ಪ್ರೋತ್ಸಾಹ ಎಂದಿದ್ದಾರೆ.