ಆಸ್ಪತ್ರೆಗಳ ವ್ಯವಸ್ಥೆ ಪರಿಶೀಲಿಸಿದ ಶಶಿಧರ್ ಕೋಸುಂಬೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,19-  ವಿಮ್ಸ್  ಹಾಗೂ ಜಿಲ್ಲಾ ಆಸ್ಪತ್ರೆಗೆ ಇಂದು  ಮಕ್ಕಳ ಆಯೋಗದ   ಸದಸ್ಯ  ಶಶಿಧರ್ ಕೋಸುಂಬಿ  ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಬಾರಿ ಮಕ್ಕಳ ತೀವ್ರ ನಿಘಾ ಘಟಕ್ಕೆ ಭೇಟಿ ನೀಡಿದ್ದಾಗ ಅವ್ಯವಸ್ಥೆ ಕಂಡು ವೈದ್ಯರಿಗೆ ತರಾಟೆಗೆ ತೆಗೆದುಕೊಡಿದ್ದ ಇವರು ಮೂರು ತಿಂಗಳಲ್ಲಿ ಎಲ್ಲ ಸರಿ ಮಾಡಬೇಕು ಎಂದು ತಾಕೀತು ಮಾಡಿದ್ದರು.
ಆ ಬಳಿಕ ಇಂದು ಭೇಟಿ ನೀಡಿ ಪರಿಶೀಲಿಸಿದ ಆಸ್ಪತ್ರೆಯಲ್ಲಿನ ಒಂದಷ್ಟು ಸುಧಾರಣೆಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ ಅವರು.