ವಿಠಲ ರುಕ್ಮಿಣಿ ಪಾಂಡುರಂಗ ದಿಂಡಿ ಸಪ್ತಾಹ
ಬೀದರ: ಜು.19:ಪ್ರತಿ ವರ್ಷದಂತೆ ಈ ವರ್ಷವು ಬೀದರ ನಗರದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಯಜ್ಞ ಸಪ್ತಾಹÀ ಜುಲೈ 15 ರಿಂದ ಪ್ರಾರಂಭವಾಗಿ ಜುಲೈ 22 ಸೋಮವಾರ ಮಧ್ಯಾಹ್ನ 1:00 ಗಂಟೆಗೆ ಶ್ರೀ ಪಾಂಡುರಂಗ ಪಲ್ಲಕ್ಕಿ ಮೆರವಣಿಗೆ ದೇವಸ್ಥಾನದಿಂದ ಪ್ರಾರಂಭವಾಗಿ ಸಾಯಂಕಾಲ ಸರಿಯಾಗಿ 6:00 ಗಂಟೆಗೆ ಶಹಾಗಂಜ ದ್ವಾರಕ್ಕೆ( ದಾಮಾಜಿ ಪಂಥ ಅಗಸಿ) ಆಗಮಿಸಿ ಮೊಸರಿನ ಗಡಗಿ(ದಹಿ ಹಂಡಿ) ಒಡೆಯುವ ಕಾರ್ಯಕ್ರಮವಿರುತ್ತದೆ.
ನಂತರ ಮುಖ್ಯ ರಸ್ತೆ, ವಿನಾಯಕ ಚೌಕ, ಚೌಬಾರಾ ಮೂಲಕ ಶ್ರೀ ಪಾಂಡುರಂಗ ದೇವಾಸ್ಥನದ ಮುಖ್ಯದ್ವಾರದಲ್ಲಿ ದಹಿ ಹಂಡಿ ಒಡೆಯುವ ಮೂಲಕ ದೇವಸ್ಥಾನದ ಗರ್ಬ ಗುಡಿ ಸೇರುತ್ತದೆ.
ಭಕ್ತರಿಗಾಗಿ ಸರಕಾರಿ ಬಾಲಕ ಬಾಲಕಿಯರ ಶಾಲಾ ಮೈದಾನದಲ್ಲಿ ಮಧ್ಯಾಹ್ನ 3:00 ಗಂಟೆಯಿಂದ 5:00 ಗಂಟೆಯವರೆಗೆ ಪ್ರಸಾದ ವಿತರಣೆ ಮಾಡಲಾಗುವುದು ಹಾಗೂ ರಾತ್ರಿ ದೇವಸ್ಥಾನದಲ್ಲಿ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಆದಕಾರಣ ಸಕಲ ಸರ್ವಬಾಂಧವರ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಭಕ್ತಿಗೆ ಪಾತ್ರರಾಗಬೇಕೆಂದು ಪಾಂಡುರಂಗ ದೇವಸ್ಥಾನ ಆರ್ಯ ವೈಶ್ಯ ಸಂಘದ ಅಧ್ಯಕ್ಷರಾದ ಡಿ. ಸಿಂಧೋಲ, ಗೌರವ ಅಧ್ಯಕ್ಷರಾದ ಅಶೋಕ ರೆಜಂತಲ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೆÇೀಲಾ, ಕಾರ್ಯದರ್ಶಿಗಳಾದ ಚಂದ್ರಶೇಖರ ಗಾದಾ ಹಾಗೂ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಆಡಳಿತ ಮಂಡಳಿ ವತಿಯಿಂದ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.