ವಾಸವಿ ಎಕ್ಸಲೆನ್ಸ್ ಪ್ರಶಸ್ತಿಗೆ ಮೈಲಾಪುರ ಭಾಜನ
ಕಲಬುರಗಿ:ಜು.19: ನಗರದಪ್ರತಿಷ್ಠಿತ ಮಹಾಲಕ್ಷ್ಮಿಗ್ರೂಪ್ ಮುಖ್ಯ ಪ್ರವರ್ತಕ ಹಾಗೂ ಕಲಬುರಗಿಯಆರ್ಯ ವೈಶ್ಯ ಸಮಾಜದಅಧ್ಯಕ್ಷರಾಘವೇಂದ್ರ ಮೈಲಾಪುರವಾಣಿಜ್ಯೋದ್ಯಮಕ್ಷೇತ್ರದಗಣನೀಯ ಸೇವೆಗಾಗಿ 2024ನೇ ಸಾಲಿನ ವಾಸವಿ ಎಕ್ಸಲೆನ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕರ್ನಾಟಕಆರ್ಯವೈಶ್ಯ ಮಹಾಸಭಾ ಹಾಗೂ ಖಾಸಗಿ ಸುದ್ದಿವಾಹಿನಿಯೊಂದರಜಂಟಿ ಪ್ರಾಯೋಜಕತ್ವದ ಈ ಪ್ರಶಸ್ತಿಯನ್ನು ಇತ್ತೀಚೆಗೆ ಬೆಂಗಳೂರಿನ ಟೌನ್‍ಹಾಲ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮೈಲಾಪುರ ಸ್ವೀಕರಿಸಿದರು.ಸಂಸದಡಿ.ಎಸ್.ಅರುಣ್, ಮಾಜಿ ಸಚಿವಅಶ್ವತ್ಥ ನಾರಾಯಣ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶಸ್ತಿ ಪ್ರದಾನ ಮಾಡಿದರು.ಮಹಾಸಭಾಅಧ್ಯಕ್ಷರಾ.ಪ.ರವಿಶಂಕರ್, ಹಿರಿಯಉಪಾಧ್ಯಕ್ಷ ಕುಂಟನಾಳ ವೆಂಕಟೇಶ್, ಖಜಾಂಚಿ ಎನ್.ಎಸ್.ಶ್ರೀನಿವಾಸಮೂರ್ತಿ, ಮಹಾಸಭಾ ನಿರ್ದೇಶಕ ವೀರೇಶ್ ವಾಗಣಗೇರಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ಕೃಷ್ಣಸೇರಿದಂತೆಇತರರು ಉಪಸ್ಥಿತರಿದ್ದರು.
ಕಳೆದ 29 ವರ್ಷಗಳಿಂದ ಕಲಬುರಗಿಯ ಸರಾಫ್ ಸಂಘದಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಮೈಲಾಪುರಎರಡು ಬಾರಿ ಎಚ್‍ಕೆಸಿಸಿಐ ಕಾರ್ಯನಿರ್ವಹಣಾಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ನಗರದಗಣೇಶ್‍ಕೋಆಪರೇಟಿವ್ ಬ್ಯಾಂಕ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಚಿನ್ನಾಭರಣ ವರ್ತಕರುಒಂದೇ ಸೂರಿನಡಿವ್ಯವಹಾರ ನಡೆಸಲು ಅನುಕೂಲವಾಗುವಂತೆ240 ಅಂಗಡಿಗಳನ್ನು ಒಳಗೊಂಡ ಬೃಹತ್‍ಗೋಲ್ಡ್ ಹಬ್ ನಿರ್ಮಿಸಿರುವ ಮೈಲಾಪುರ, ಈ ಸಾಧನೆಗಾಗಿ 2014ರಲ್ಲಿ ಕ್ರೆಡಾಯ್ ಸಂಸ್ಥೆಯಅತ್ಯುತ್ತಮಅನ್ವೇಷಣಾ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ರಿಯಲ್‍ಎಸ್ಟೇಟ್‍ಕ್ಷೇತ್ರದಲ್ಲಿಯೂ ಹೆಸರು ಮಾಡಿರುವರಾಘವೇಂದ್ರ ಮೈಲಾಪುರ, ನಗರೇಶ್ವರ ವೆಲ್ಫೇರ್ ಸೊಸೈಟಿಅಧ್ಯಕ್ಷರಾಗಿಯೂ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.