ಸುದ್ದಿ ಮಾಧ್ಯಮಗಳ ಆಧಾರ ಸ್ತಂಭವಾದ ಪತ್ರಕರ್ತರ ನಿರ್ಲಕ್ಷ್ಯ ಸಲ್ಲದು: ಶಶೀಲ್ ಜಿ ನಮೋಶಿ
ಕಲಬುರಗಿ:ಜು.19:ಸಮಾಜದ ಸರಿ ತಪ್ಪುಗಳನ್ನು ಯತಾವತ್ ಆಗಿ ಜನಗಳ ಮುಂದಿಡುವ ಪತ್ರಕರ್ತರು ಸಮಾಜದಅತಿ ಮುಖ್ಯ ವರ್ಗವಾಗಿದೆ ಹಾಗು ಸಮಾಜದ ಏಳಿಗೆಯಲ್ಲಿ ಇವರುಗಳ ಪಾತ್ರ ಪ್ರಮುಖವಾಗುತ್ತದೆ ಹಾಗೆಯೇ ಪತ್ರಕರ್ತರ ಏಳಿಗೆಯ ಕುರಿತು ಸರ್ಕಾರದ ಕ್ರಮಗಳ ಕುರಿತು ವಿಧಾನ ಪರಿಷತ್ತಿನಲ್ಲಿ ಪ್ರಶ್ನಿಸಲಾಗಿ ಸರ್ಕಾರದಉತ್ತರವನ್ನು ನೋಡಿದರೆ ನಿವೃತ್ತ ಪತ್ರಕರ್ತರಿಗೆ ನೀಡುವ 2000 ಹೆಚ್ಚಳ ಬಿಟ್ಟರೆ ಈ ಹಿಂದಿನಿಂದ ಬಂದಂತಹ ಬಸ್ ಪಾಸ್ ಸೌಕರ್ಯ ಬಿಟ್ಟರೆ ನಂತರದಲ್ಲಿಯಾವುದೇ ಸೌಕರ್ಯ ನೀಡದಿರುವುದು ಪತ್ರಕರ್ತರಕಡೆಗಣನೆಎದ್ದುಕಾಣುತ್ತಿದೆ.
ಮುಖ್ಯ ಮಂತ್ರಿಗಳು ನನ್ನ ಪ್ರಶ್ನೆಗೆ ನೀಡಿದಉತ್ತರದಲ್ಲಿಗ್ರಾಮೀಣ ಪತ್ರಕರ್ತರಿಗೆಉಚಿತ ಬಸ್ ಪಾಸ್ ನೀಡುವಕುರಿತುಕ್ರಮ ಕೈಗೊಳ್ಳಲಾಗುತ್ತದೆ ಎಂದುಉತ್ತರಿಸುತಿದ್ದುಗ್ರಾಮೀಣ ಭಾಗದಲ್ಲಿ ಸಾರಿಗೆ ವ್ಯವಸ್ಥೆಯ ಸರಿಯಾಗಿ ನಿರ್ವಹಸದಿರುವ ಸಮಯದಲ್ಲಿಇದುಅವೈಜ್ಞಾನಿಕಎಂದೆನಿಸುತಿದ್ದುಇದರ ಬದಲು ಸ್ಥಳೀಯ ಪತ್ರಕರ್ತರನ್ನು ಗುರುತಿಸಿ ಅವರಿಗೆ ಮಾಶಾಸನವನ್ನು ಹಾಗು ದ್ವಿಚಕ್ರ ವಾಹನ ನಿರ್ವಹಣೆಗೆ/ ಖರೀದಿಗೆಅನುದಾನ ನೀಡಬೇಕು ಹಾಗೂಮಾಸಾಶನ ನೀಡಲುಇರುವ ನಿಯಮಅವೈಜ್ಞಾನಿಕವಾಗಿದೆ. ನಿಯಮ ಸರಳೀಕರಣ ಮಾಡಬೇಕು.ಮಾನ್ಯತೆ ಪಡೆದಅರ್ಹ ಪತ್ರಕರ್ತರಿಗೆ ಸರ್ಕಾರರಿಯಾಯಿತಿದರದಲ್ಲಿ ನಿವೇಶನ ಹಂಚಿಕೆ ಮಾಡ ಬೇಕು. ಪತ್ರಕರ್ತರಯೋಗಕ್ಷೇಮ ನೋಡಿಕೊಳ್ಳು ಹಣ ಮೀಸಲಿಟ್ಟು ಪತ್ರಕರ್ತರಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಮೂಲಕ ಪತ್ರಕರ್ತರ ಪರ ಸರ್ಕಾರ ನಿಲ್ಲಬೇಕಿದೆ
ನಿಯಮಿತ ವರಮಾನವಿಲ್ಲದ ಪತ್ರಕರ್ತರಿಗೆ ಬ್ಯಾಂಕ್ ಗಳಲ್ಲಿ ಸಾಲ ನೀಡಲೂ ಹಿಂದೇಟು ಹಾಕುತಿದ್ದು ಪತ್ರಿಕೋದ್ಯಮದಲ್ಲಿ ಹೊಸ ಅವಕಾಶಗಳಿಗೆ ಸರ್ಕಾರದಿಂದ ಸೂಕ್ತ ಆರ್ಥಿಕ ಸೌಲಭ್ಯ ನೀಡುವಕುರಿತು ಸರ್ಕಾರದ ಸೂಕ್ತ ನಿರ್ಧಾರತೆಗೆದುಕೊಂಡು ಬಜೆಟ್ ನಲ್ಲಿಘೋಷಣೆ ಮಾಡಿದಂತೆ ಮತ್ತುಚುನಾವಣೆಯ ಸಮಯದಲ್ಲಿತಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ ಪತ್ರಕರ್ತರಯೋಗಕ್ಷೇಮಕ್ಕಾಗೆಎಲ್ಲಯೋಜನೆ ಜಾರಿಗೊಳಿಸಲು ನಮೋಶಿ ಅವರು ಆಗ್ರಹಿಸಿದರು