ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ ; ಅರುಣಕುಮಾರ ಪಾಟೀಲ
ಅಫಜಲಪುರ ;ಜು.19: ತಾಲ್ಲೂಕಿನ ಚೌಡಾಪುರ ಹತ್ತಿರದ ಕಸ್ತೂರಬಾಗಾಂಧಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಚಿಣಮಗೇರಾ ಬಾಲಕಿಯರ ಶಾಲಾ ಮತ್ತು ವಸತಿ ನೀಲಯಕ್ಕೆ ಕೆಪಿಸಿಸಿ ಸದಸ್ಯರು ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಮಂಡಳಿ ನಿರ್ದೇಶಕರಾದ ಅರುಣಕುಮಾರ ಎಂ. ವೈ. ಪಾಟೀಲ ಅವರು ಭೇಟಿ ನೀಡಿ ಮಕ್ಕಳಿಗೆ ಸರಿಯಾದ ಸೌಲಭ್ಯಗಳನ್ನು ಒದಗಿಸಲು ವಸತಿ ನಿಲಯದ ಮೇಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಚಿನ್ಮಯಗಿರಿ ಮಠದ ಪೀಠಾಧಿಪತಿಗಳಾದ ಶ್ರೀ ಷ. ಬ್ರ. ಮಹಾಂತ ಶಿವಾಚಾರ್ಯರು, ಶಾಲೆಯ ಮುಖ್ಯಗುರುಗಳು ಅಡುಗೆ ಕೋಣೆ, ಬಾಲಕಿರ ವಸತಿಗೃಹ ವೀಕ್ಷಣೆ ಮಾಡಿ ಅವಶ್ಯವಿರುವ ವಿಷಯಗಳನ್ನು ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳೊಡನೆ ಚರ್ಚೆ ನಡೆಸಿ ಕೂಡಲೇ ಸ್ಪಂದಿಸಿ ಮತ್ತೊಮ್ಮೆ ಮಾರುಕಳಸದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಲಾಯಿತು ಎಂದು ಮಾದ್ಯಮದವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಚಿನ್ ಲಿಂಗಶೆಟ್ಟಿ, ಸಿದ್ದು ಜವಳಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.