ಗುರು ಪೂರ್ಣಿಮೆ 21 ರಂದು
ಬೀದರ್: ಜು.19:ನಗರದ ಸಿದ್ಧಾರೂಢ ಮಠದಲ್ಲಿ ಜುಲೈ 21 ರಂದು ಗುರು ಪೂರ್ಣಿಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಾ. ಶಿವಕುಮಾರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಮಠದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಮಠದ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ತಿಳಿಸಿದ್ದಾರೆ.
ಬೆಳಿಗ್ಗೆ 6 ರಿಂದ 8 ರ ವರೆಗೆ ಸಿದ್ಧಾರೂಢರ ಮಹಾ ರುದ್ರಾಭಿಷೇಕ, ಬೆಳಿಗ್ಗೆ 9 ರಿಂದ 10 ರ ವರೆಗೆ ಗುರುಸ್ತೋತ್ರ, ಭಜನೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಶ್ರೀಗಳ ಆಶೀರ್ವಚನ, ನಂತರ ಸಾಧಕ, ಸಾಧಕಿಯರಿಂದ ಷೋಡಶೋಪಚಾರ ಮೂಲಕ ಶ್ರೀಗಳ ಪಾದಪೂಜೆ, ಸುವರ್ಣ ಕಿರೀಟ ಧಾರಣೆ ಹಾಗೂ ಕನಕ ಪುಷ್ಪವೃಷ್ಟಿ ಜರುಗಲಿದೆ ಎಂದು ಹೇಳಿದ್ದಾರೆ.
ಕಸ್ತೂರಿಬಾಯಿ ಬಸವಂತರಾಯ ಬಿರಾದಾರ ಇಂಡಿ, ಶಿವಲೀಲಾ ರುಕ್ಕಪ್ಪ ಪಾಟೀಲ ಹಾಗೂ ಚಳಕಾಪುರದ ಬಲಭೀಮ ಪುಟಣಿಗಾರ ಅವರು ನಾಣ್ಯಗಳಿಂದ ಶಿವಕುಮಾರ ಸ್ವಾಮೀಜಿ ಅವರ ತುಲಾಭಾರ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.