ಕರವೇ ಪ್ರತಿಭಟನೆ
ಹುಬ್ಬಳ್ಳಿ,ಜು.19: ಕರ್ನಾಟಕ ಸರ್ಕಾರ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕವನ್ನು ತಂದಿದ್ದು ಸ್ವಾಗತಾರ್ಹ. ಆದರೇ ಕೆಲ ಖಾಸಗಿ ಕಂಪನಿಗಳು ಸರ್ಕಾರ ಹೊರಡಿಸಿರುವ ವಿಧೇಯಕವನ್ನು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ ಎಂದು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ (ಪ್ರವೀಣ್ ಕುಮಾರ ಶೆಟ್ಟಿ ಬಣ) ಪ್ರತಿಭಟನೆ ನಡೆಸಲಾಯಿತು.
ಸರ್ಕಾರ ಹೊರಡಿಸಿರುವ ವಿಧೇಯಕವನ್ನು ಖಾಸಗಿ ಕೆಲ ಕಂಪನಿಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನಾರ್ಹ. ಈ ಕೂಡಲೇ ಖಾಸಗಿ ಕಂಪನಿಗಳ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಹುಬ್ಬಳ್ಳಿ ತಹಶಿಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ, ಹುಬ್ಬಳ್ಳಿ ತಾಲೂಕು ಅಧ್ಯಕ್ಷ ಪ್ರವೀಣ್ ಗಾಯಕವಾಡ, ಪದಾಧಿಕಾರಿಗಳಾದ ಮಂಜುನಾಥ ಹಳ್ಳಿಕೇರಿ, ಪ್ರವೀಣ್ ಮೇಟಿ ಮೊದಲಾದವರು ಪಾಲ್ಗೊಂಡಿದ್ದರು.