ಕಾನೂನು ಕ್ರಮ
ನವಲಗುಂದ,ಜು.19: ಇದೆ ಭಾನುವಾರ ಜುಲೈ 21 ರಂದು ರೈತಹುತಾತ್ಮ ದಿನಾಚರಣೆ ದಿನ ಯಾವುದೇ ಅಹಿತಕರ ಘಟನೆಗಳು ನಡೆದರೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಹುತಾತ್ಮ ದಿನಾಚರಣೆಗೆ ಹೆಚ್ಚಿನ ಪೆÇಲೀಸ್ ಬಂದೋಬಸ್ತ, ಬ್ಯಾರಿಕೇಡ್ ವ್ಯವಸ್ಥೆ, ಸಂಚಾರ ತೊಂದರೆ ಆಗದಂತೆಯೂ ಕ್ರಮವಹಿಸಲಾಗುವುದು ಎಂದು ಧಾರವಾಡ ಡಿವಾಯ್‍ಎಸ್ ಪಿ ಎಸ್.ಎಮ್. ನಾಗರಾಜ ಹೇಳಿದರು.
ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಜರುಗಿದ ರೈತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಶಾಂತಿಸುವ್ಯವಸ್ಥೆ ಹದಗೆಡದಂತೆ ತಾವುಕೂಡ ನಿಗಾವಹಿಸಿ ಸಹಕರಿಸಿ, ಮುಂಚಿತವಾಗಿ ಅಹಿತಕರ ಘಟನೆಗಳ ಬಗ್ಗೆ ಮಾಹಿತಿ ಬಂದಲ್ಲಿ ಪೆÇಲೀಸ್ ಇಲಾಖೆಗೆ ಮಾಹಿತಿ ನೀಡಿಬೇಕು ಇನ್ನೂ ಅಂದಿನ ದಿವಸ ಹುಬ್ಬಳ್ಳಿ ಹಾಗೂ ವಿಜಯಪುರ ಬಾಗದಿಂದ ಬರುವ ಭಾರಿವಾಹನಗಳಿಗೆ ಮಾರ್ಗಬದಲಾವಣೆ ಮಾಡಿ ಸಂಚಾರಕ್ಕೆ ಅನುಕೂಲ ಮಾಡಲಾಗುವುದು ಎಂದರು.
ಇದಕ್ಕೂ ಮೊದಲು ರೈತ ಮುಖಂಡರಾದ ಶಂಕರ ಅಂಬಲಿ ಹಾಗೂ ಲೋಕನಾಥ ಹೆಬಸೂರ ಮಾತನಾಡಿ ಜುಲೈ 21ರ ದಿವಸ ಬೆಳೆಹಾನಿ ಪರಿಹಾರದ ಬಗ್ಗೆ ಶಾಂತ ರೀತಿಯಿಂದ ಹೋರಾಟ ಮಾಡುತ್ತೇವೆ ಎಂದರು.
ತಹಸೀಲ್ದಾರ ಸುಧೀರ ಸಾಹುಕಾರ, ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್‍ಐ ಜನಾರ್ಧನ ಬಿ ಹಾಗೂ ರೈತ ಹೋರಾಟಗಾರರಾದ ಲೋಕನಾಥ ಹೆಬಸೂರ, ಶಂಕರ ಅಂಬಲಿ, ರವಿರಾಜ ಕಂಬಳಿ, ನಾರಾಯಣ ಆರೇರ, ಮೈಲಾರಪ್ಪ ವೈದ್ಯ, ಎ. ಆರ್. ತಿವಾರಿ, ಗುರುನಾಥ ಹೆಬಸೂರ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು