ಆರೋಗ್ಯ ಶುಚಿತ್ವ ಜಾಗೃತಿ
ಮುನವಳ್ಳಿ,ಜು.19: ಪಟ್ಟಣದ ಇನ್ನರ್‍ವ್ಹೀಲ್ ಕ್ಲಬ್ ಆಫ್ ಮುನವಳ್ಳಿ ಹಾಗೂ ಕುಮಾರೇಶ್ವರ ವಿದ್ಯಾಮಂದಿರ ಸಂಯುಕ್ತಾಶ್ರಯದಲ್ಲಿ ವೈದ್ಯರ ಹಾಗೂ ಪತ್ರಿಕಾ ದಿನದ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಆರೋಗ್ಯ ಶುಚಿತ್ವ ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ|| ನಯನಾ ಭಸ್ಮೆ ಕಿಶೋರಿಯರಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಬದಲಾವಣೆ ಆಗುವುದು ಸಹಜ ಪ್ರಕ್ರಿಯಯಾಗಿದ್ದು ಆರೋಗ್ಯ ಜಾಗೃತಿ ಮೂಡಿಸುವುದು ಅವಶ್ಯ. ಕಿಶೋರಿಯರು ಋತುಚಕ್ರ ಸಮಯದಲ್ಲಿ ಸ್ವಚ್ಛೆತೆ ಕಡೆಗಣಿಸಬಾರದು ಭಯ, ಮುಜುಗರ ಗೊಂದಲಕ್ಕೆ ಒಳಗಾಗದೆ ಪಾಲಕರು ಹಾಗೂ ವೈದ್ಯರ ಸಲಹೆ ಪಡೆಯಬೇಕು ಪೌಷ್ಟಿಕ ಆಹಾರ ಸೇವಿಸಬೇಕು ತಮ್ಮ ಆರೋಗ್ಯದ ಕಡೆ ಗಮನ ಇಟ್ಟುಕೊಂಡು ಜಾಗೃತರಾಗಿರಬೇಕು ಎಂದರು.
ಅನುರಾಧಾ ಬೆಟಗೇರಿ ಮಾತನಾಡಿ ವಿದ್ಯಾರ್ಥಿನಿಯರು ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಸಬಲರಾಗಬಲ್ಲರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವಕೊಟ್ಟು ಕಲೆತು ಶಾಲೆಗೆ ಹಾಗೂ ಹೆತ್ತವರಿಗೆ ಗೌರವ ತರುವ ಕೆಲಸ ಮಾಡಿ ನಿಮ್ಮ ಗುರಿಗಳನ್ನು ಇಟ್ಟು ಸಾಧನೆ ಮಾಡಿ ಎಂದರು.
ಇನ್ನರ್‍ವ್ಹೀಲ್ ಅಧ್ಯಕ್ಷೆ ಸುಜಾತಾ ಕೋರಿ, ಅಶ್ವಿನಿ ಬಾಳಿ, ಸುಷ್ಮಾ ಗೋಮಾಡಿ, ಲಲಿತಾ ಕಾಮಶೆಟ್ಟಿ, ಪ್ರೀತಿ ಕರಿಕಟ್ಟಿ, ಪೂಜಾ ಗೋಪಶೆಟ್ಟಿ, ಗೀತಾ ಜಾವೂರ, ಉಮಾ ಹಂಪಣ್ಣವರ, ಸಹನಾ ನಲವಡೆ, ಸುಜಾತಾ ಪಾಟೀಲ, ಗೌರಿ ಜಾವೂರ, ಶೀತಲ ಗೋಮಾಡಿ, ಮುಖ್ಯ ಶಿಕ್ಷಕ ಶಂಕರ ರಾಠೋಡ, ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
ಪತ್ರಕರ್ತರಾದ ಟಿ.ಎನ್.ಮುರಂಕರ, ವೀರಣ್ಣ ಕೋಳಕಿ, ಪ್ರಶಾಂತ ತುಳಜನ್ನವರ ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಕಿಟ್‍ಗಳನ್ನು ವಿತರಿಸಲಾಯಿತು.