ಧಾರಾಕಾರ ಮಳೆ: ನೆಲ ಕಚ್ಚಿದ ಮನೆಗಳು
ಚನ್ನಮ್ಮನ ಕಿತ್ತೂರು,ಜು19: ಕಳೆದ ಒಂದು ವಾರದಿಂದ ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು ಖಾನಾಪೂರ ತಾಲೂಕಿನಲ್ಲಿ ಅತಿಯಾಗಿ ಮಳೆ ಬೀಳುತ್ತಿದೆ. ತಾಲೂಕಿನ ಗಡಿ ಗ್ರಾಮವಾದ ಮಂಗೇನಕೊಪ್ಪ ವ್ಯಾಪ್ತಿಗೆ ಒಳಪಡುವ ಕಸಮಳಗಿ ಗ್ರಾಮದಲ್ಲಿ ಸುರಿದ ಮಳೆಯಿಂದ ಮಹಮ್ಮದಲಿ ಬಿಚ್ಚುನ್ನವರ, ಮಹಾದೇವಿ ತೇಗೂರ ಇವರ ಮನೆಗಳು ನೆಲಕಚ್ಚಿದ್ದು ಸ್ಥಳಕ್ಕೆ ತಹಶೀಲ್ದಾರ ಪ್ರಕಾಶ ಗಾಯಕವಾಡ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು ನಂತರ ಮಾತನಾಡಿ ಮುಂದಿನ ಕ್ರಮಕ್ಕಾಗಿ ಮೇಲ ಅಧಿಕಾರಿಗಳ ಗಮನ ಸೆಳೆಯಲಾಗುವುದು. ಕಳೆದೆರಡು ದಿನಗಳಿಂದ ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವದರಿಂದ ಜಿಲ್ಲಾಧಿಕಾರಿ ಮೊಹಮ್ಮದ ರೋಶನ್ ಇವರ ಆದೇಶದ ಮೇರೆಗೆ ದಿ. 19 ರಿಂದ 20 ರ ವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಕಂದಾಯ ನಿರೀಕ್ಷಕ ಬಿ.ಎನ್.ಸಿಮಾಣಿ, ಪಿಡಿಓ ರಾಜು ತಳವಾರ, ಗ್ರಾಪಂ ಉಪಾಧ್ಯಕ್ಷ ಉದಯ ಬಡಸ್ಕರ, ಗ್ರಾಪಂ ಸದಸ್ಯ ಈರಪ್ಪ ಹುಬ್ಬಳ್ಳಿ, ಗ್ರಾಮ ಲೆಕ್ಕಿಗರಾದ ಶಿವಕುಮಾರ ಎಸ್, ಮಂಜುನಾಥ ಸಂಗಮನ್ನವರ, ದೇವರಾಜ ಎಚ್, ಗ್ರಾಪಂ ಸಿಬ್ಬಂದಿ ಶೇಖರ ಪೆಜೋಳ್ಳಿ ಸೇರಿದಂತೆ ಗ್ರಾಮಸ್ಥರಿದ್ದರು.