ಮುಖ್ಯ ಮಂತ್ರಿ ಬದಲಾವಣೆ ಇಲ್ಲ ;ಕೆಎಚ್‌ಎಂ
ಕೋಲಾರ,ಜು,೧೯- ರಾಜ್ಯದ ಮುಖ್ಯ ಮಂತ್ರಿ ಬದಲಾವಣೆ ಇಲ್ಲ. ಕಾನೂನು ಪ್ರಕಾರ ಏನು ಕ್ರಮ ಜರುಗಿಸ ಬೇಕು.ಅದನ್ನು ಸರ್ಕಾರ ಮಾಡುತ್ತಿದೆ ಎಂದು ರಾಜ್ಯ ಆಹಾರ ಖಾತೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಮಾದ್ಯಮದವರೊಂದಿಗೆ ಅವರು ಮಾತನಾಡುತ್ತಾ ಎಲ್ಲಾ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಈಗಾಲೇ ನಾವು ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದರು.
ಮುಖ್ಯ ಮಂತ್ರೀಗಳೇ ಹಣಕಾಸು ಸಚಿವರು ಅಗಿದ್ದರೂ ಸಹ ಇದರಲ್ಲಿ ಅವರ ಯಾವ ಪಾತ್ರವೂ ಇಲ್ಲ ಎಂಬುವುದು ನಮ್ಮ ಅಭಿಪ್ರಾಯವಾಗಿದೆ. ಏನು ನಡೆದಿದೆ ಎಂಬುವುದನ್ನು ಇ.ಡಿ. ಅಧಿಕಾರಿಗಳ ಮೂಲಕ ವಿಚಾರಣೆ ನಡೆಸಲಾಗುತ್ತಿದೆ. ಅವರ ವಿಚಾರಣೆಯ ನಂತರ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಹೇಳಿದರು,
ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣದ ಅರೋಪಗಳು ವಿಚಾರಣೆಯ ಹಂತದಲ್ಲಿದೆ. ವಿಚಾರಣೆಯ ಫಲಿತಾಂಶ ಏನು ಬರುತ್ತದೆ ಎಂಬುವುದನ್ನು ಕಾದು ನೋಡುವಂತ ತಾಳ್ಮೇ ಬೇಕು, ಅದರೆ ವಿರೋಧ ಪಕ್ಷಗಳು ಬಾಯಿಗೆ ಬಂದಂತೆ ಹೇಳಿಕೆಗಳು ನೀಡುತ್ತಿರುವುದು ಸಮಂಜಸವಲ್ಲ ಎಂದರು,
ರಚನಾತ್ಮಕ ವಿಷಯಗಳಲ್ಲಿ ದೇಶದ ಅಭಿವೃದ್ದಿ ವಿಚಾರಗಳಲ್ಲಿ ಸತ್ಯವನ್ನು ಮುಂದಿಟ್ಟು ಕೊಂಡು ವಿಪಕ್ಷಗಳು ಮಾತನಾಡು ಬೇಕು, ರಾಜ್ಯದ ೪.೫ ಕೋಟಿ ಜನತೆ ನೆಮ್ಮದಿಯಿಂದ ಜೀವನದ ದಾರಿಯನ್ನು ಮಾಡಿ ಕೊಟ್ಟಿರುವ ರಾಜ್ಯ ಭಾರತದಲ್ಲಿ ಕರ್ನಾಟಕ ರಾಜ್ಯವಾಗಿದೆ ಇಂಥಹ ಪವಿತ್ರವಾದ ಕೆಲಸಗಳನ್ನು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮಾಡಿ ಕೊಟ್ಟಿರುವಾಗ ಮುಖ್ಯ ಮಂತ್ರಿ ಸ್ಥಾನವನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಮುನಿಯಪ್ಪ ಪ್ರತಿಪಾದಿಸಿದರು,