ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಕನಕಪುರ, ಜು.೧೯- ಮನುಷ್ಯನನ್ನು ಹೊರತು ಪಡಿಸಿ ಈ ಭೂಮಿಯ ಮೇಲೆ ಇರುವ ಪಶು ಪಕ್ಷಿಗಳು, ಗಿಡಮರಗಳು ಜಲಚರಗಳಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲ, ಮನುಷ್ಯಮಾತ್ರ ಪರಿಸರಕ್ಕೆ ಹಾನಿಯನ್ನು ಉಂಟು ಮಾಡುತ್ತಿದ್ದಾನೆ ಎಂದು ನಗರಸಭಾ ಆಯುಕ್ತಕರಾದ ಎಂ.ಎಸ್. ಮಹದೇವ್ ಹೇಳಿದ್ದಾರೆ.
ಕನಕಪುರ ನಗರದ ಮಳಗಾಳು ಗ್ರಾಮದಲ್ಲಿ ಲಯನ್ಸ್ ಮತ್ತು ಲಿಯೋ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಸಸಿನೆಡುವ ಕಾರ್‍ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯ ತನ್ನ ಅಗತ್ಯಕ್ಕೆ ಅತಿಯಾಗಿ ಪ್ಲಾಸ್ಟಿಕ್ ಬಳಕೆಯನ್ನು ಮಾಡುತ್ತಿದ್ದು ಇದರಿಂದ ಮರ ಗಿಡ ನಾಶವಾಗುವುದರ ಜೊತೆ ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ ಇದರಿಂದ ನಾವು ಅತಿ ಬೇಗ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಬೆಲೆಯನ್ನು ತೆರಬೇಕಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಗಿಡನೆಡುವ ಕಾರ್‍ಯಕ್ರಮದ ಅಧ್ಯಕ್ಷ ಮರಸಪ್ಪ ರವಿ ಮಾತನಾಡಿ ನಮ್ಮ ಹಿರಿಯರು ನಮಗೆ ಒಳ್ಳೆಯ ಗಿಡಮರಗಳನ್ನು ಬೆಳೆಸಿ ಒಳ್ಳೆಯ ಪರಿಸರವನ್ನು ಬಿಟ್ಟುಹೋಗಿದ್ದಾರೆ ನಾವೂ ಕೂಡ ನಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಬಿಟ್ಟುಹೋಗಬೇಕಾದರೆ ಗಿಡಗಳನ್ನು ನೆಟ್ಟು ಅವುಗಳನ್ನು ಬೆಳೆಸುವ ಮೂಲಕ, ಮರಗಳನ್ನು ಕಡಿಯವತ್ತ ಮನಸ್ಸು ಮಾಡದೆ ಒಳ್ಳೆಯ ನಾಡುಕಟ್ಟೋಣವೆಂದು ಕರೆನೀಡಿದರು.
ನಮೊಟ್ಟಿಗೆ ಈ ಭೂಮಿಯಲ್ಲಿ ಪಶುಪಕ್ಷಿಗಳೂ ಕೂಡ ಇದ್ದಾಗ ಮಾನವ ಸುಖಿಯಾಗಿ ಇರಲು ಸಾದ್ಯ ಅವುಗಳಿಗೆ ಆಶ್ರವನ್ನು ನೀಡುವ ಮರಗಳನ್ನು ಬೆಳೆಸುವತ್ತ ಎಲ್ಲರ ಆಲೋಚನೆ ಇರಬೇಕಾಗಿದೆ ಇಂದು ನಾವು ೨೦೦ಕ್ಕೂ ಹೆಚ್ಚು ಸೀಬೆ, ಸೀತಾಫಲ, ರಾಮಫಲಒಳಗೊಂಡ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡುವುದರ ಜೊತೆ ವಿತರಣೆಯನ್ನು ಕೂಡ ಮಾಡಲಾಗುತ್ತಿದೆ ಎಂದರು.
ಈ ಕಾರ್‍ಯಕ್ರಮದಲ್ಲಿ ಶಿವಕುಮರ್ ಬಿಳಿಗಿರ ರಂಗಸ್ವಾಮಿ, ಪ್ರಶಾಂತ್, ಕಾಂತರಾಜು, ಸಂಪತ್ತ್, ಶ್ರೀನಿವಾಸ್, ಮಹೇಶ್, ಜೈರಾಮು, ದಾಸಪ್ಪ, ವಿಜಯ್ ಕುಮಾರ್ ಗೋಪಾಲ್ ರಾಜು, ಮೊದಲಾದವರು ಉಪಸ್ಥಿvರಿದ್ದರು…