ಇಂದಿನಿಂದ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ಆರಂಭ
ಕೋಲಾರ,ರಿu,೧೯- ಶಾಲಾ ಶಿಕ್ಷಣ ಇಲಾಖೆಯಿಂದ ೨೦೨೩-೨೪ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-೨ ಮತ್ತು ಪ್ರೌಢ ಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-೧ ಮತ್ತು ವಿಶೇಷ ಶಿಕ್ಷಕರ ಹೆಚ್ಚುವರಿ ವರ್ಗಾವಣೆ ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆಗಳು ಹಾಗೂ ನಿರ್ದಿಷ್ಟ ಪಡಿಸಿದ ವೃಂದದ (ಕನಿಷ್ಠ ೦೩ ರಿಂದ ೦೫ ವರ್ಷದೊಳಗಡೆ) ಶಿಕ್ಷಕರ ಗಣಕೀಕೃತ ಕೌನ್ಸಿಲಿಂಗ್‌ನ ವೇಳಾಪಟ್ಟಿ ಪ್ರಕಟಿಸಿದ್ದು, ಜು.೧೯ ರಿಂದ ಪ್ರಕ್ರಿಯೆ ತಮ್ಮ ಕಚೇರಿಯ ಎಸ್‌ಎಸ್‌ಎ ವಿಭಾಘದಲ್ಲಿ ಆರಂಭಗೊಳ್ಳಲಿದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ ಹಾಗೂ ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್‌ನಲ್ಲಿ ಜು.೧೯ ರಂದು ಪೂರ್ವಾಹ್ನ ಗರಿಷ್ಠ ೫ ವರ್ಷ ಅವಧಿ ಮುಗಿದ ಪ್ರಾಥಮಿಕ ಶಾಲಾ ಶಿಕ್ಷಕರು ನಿರ್ಧಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್‌ನಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಗರಿಷ್ಟ ೫ ವರ್ಷ ಮುಗಿದ ನಿರ್ಧಿಷ್ಟಪಡಿಸಿದ ಶಿಕ್ಷಕರ ಅಂತಿಮ ಪಟ್ಟಿಯಂತೆ ಶಿಕ್ಷಕರು ಹಾಜರಾಗಬೇಕು.
ಜು.೨೨ ರಂದು ಪೂವಾಹ್ನ ಜಿಲ್ಲಾ ಹಂತದಲ್ಲಿನ ಉಳಿಕೆಯಾಗುವ ಗರಿಷ್ಟ ೫ ವರ್ಷ ಅವಧಿ ಮುಗಿದ ಪ್ರಾಥಮಿಕ ಶಾಲಾ ಶಿಕ್ಷಕರ ನಿರ್ಧಿಷ್ಟಪಡಿಸಿದ ಮತ್ತು ತಆಂತ್ರಿಕ ಸಹಾಯಕರು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.
ಜು.೨೪ ರಿಂದ ೨೫ರಂದು ಕೋರಿಕೆ ವರ್ಗಾವಣೆಯ ಅಂತಿಮ ಜೇಷ್ಟತಾ ಪಟ್ಟಿಯಂತೆ ಅರ್ಜಿ ಸಲ್ಲಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಅಂತಿಮ ಪಟ್ಟಿಯಂತೆ ಸ್ಥಳ ನಿಯುಕ್ತ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಜು.೨೯ ರಂದು ಪೂವಾಹ್ನ ಪ್ರಾಥಮಿಕ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆಯ ಅಂತಿಮ ಜೇಷ್ಟತಾ ಪಟ್ಟಿಯಂತೆ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದ್ದಾರೆ.
ಜು.೩೦ ರಂದು ಕನಿಷ್ಟ ೩ ರಿಂದ ೫ ವರ್ಷದೊಳಗಡೆ ಮುಗಿದ ನಿರ್ಧಿಷ್ಟಪಡಿಸಿದ ಶಿಕ್ಷಕರು, ತಾಂತ್ರಿಕ ಸಹಾಯಕರು ಅಂತಿಮ ಪಟ್ಟಿಯಂತೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದಿದ್ದಾರೆ.
ಪಟ್ಟಿಯಲ್ಲಿರುವ ಶಿಕ್ಷಕರು ವೇಳಾ ಪಟ್ಟಿಯಲ್ಲಿ ಸೂಚಿಸಿರುವ ದಿನಾಂಕಗಳಂದು ಸೂಚಿಸಿರುವ ಸಮಯಕ್ಕೆ ಕೌನ್ಸಿಲಿಂಗ್‌ಗೆ ಹಾಜರಾಗುವುದು. ತಡವಾಗಿ ಬಂದಲ್ಲಿ ನಿಮ್ಮ ಕ್ರಮ ಸಂಖ್ಯೆ ಮುಂದೆ ಹೋಗಿದ್ದಲ್ಲಿ ಆನ್‌ಲೈನ್ ಕೌನ್ಸಿಲಿಂಗ್ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಕಾಶವಿರುವುದಿಲ್ಲ. ಪಟ್ಟಿಯಲ್ಲಿರುವ ಶಿಕ್ಷಕರು ಮಾತ್ರ ಕೌನ್ಸಿಲಿಂಗ್‌ಗೆ ಹಾಜರಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ.