ಅಬಕಾರಿ ಇಲಾಖೆಯಲ್ಲಿ ಭ್ರಷಚಾರ; ಅನಿಲ್ ಆರೋಪ
ಕೋಲಾರ,ಜು,೧೯- ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಿಂದ ಸಿಎಲ್-೭ ಮಳಿಗೆಯ ಅನುಮತಿ ಪಡೆಯಲು ಕನಿಷ ೮೦ ರಿಂದ ೮೫ ಲಕ್ಷಗಳ ರೂಪಾಯಿಗಳ ಪ್ಯಾಕೇಜ್ ನೀಡಬೇಕಾಗಿದೆ ಎಂದು ವಿಧಾನ ಪರಿಷತ್‌ನಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಅಬಕಾರಿ ಇಲಾಖೆಯ ವಿರುದ್ದ ಗಂಭೀರ ಆರೋಪ ಮಾಡಿದರು.
ವಿಧಾನ ಪರಿಷತ್ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು ಕೋಲಾg ಜಿಲ್ಲೆಯಲ್ಲಿ ೨೦೦೦ ದಿಂದ ೨೦೧೯ ರವರೆಗಿನ ೧೯ ವಷಗಳ ಅವಧಿಯಲ್ಲಿ ೪೧ ಸಿಎಲ್-೨, ಸಿಎಲ್- ಮದ್ಯದ ಮಳಿಗೆಗಳಿಗೆ ಅನುಮತಿ ನೀಡಲಾಗಿತ್ತು .ಆದರೆ ೨೦೨೧ ರಿಂದ ೨೦೨೩ ರವರೆಗಿನ ಮೂರು ವಷಗಳ ಅವಧಿಗೆ ಸುಮಾರು ೬೪ ಮಳಿಗೆಗಳಿಗೆ ಅನುಮತಿ ನೀಡಲಾಗಿದೆ. ಪರೋಕ್ಷವಾಗಿ ಸರಕಾರದ ಸದುದ್ದೇಶವನ್ನು ಹಾಳು ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಅಬಕಾರಿ ಇಲಾಖೆಯಿಂದ ಯಾವುದೇ ಷರತ್ತುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತಿಲ್ಲ ಒಂದು ಮಳಿಗೆ ಪ್ರಾರಂಭಿಸಲು ನಗರ ಪ್ರದೇಶದಲ್ಲಿ ೫.೭೫ ಲಕ್ಷ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ೪.೬೦ ಲಕ್ಷವನ್ನು ಸರಕಾರವೇ ನಿಗಧಿ ಪಡಿಸಲಾಗಿದೆ .ಆದರೆ ರಾಜಾ ರೋಷವಾಗಿ ಪ್ಯಾಕೇಜ್ ರೂಪದಲ್ಲಿ ೮೦ ರಿಂದ ೮೫ ಲಕ್ಷವನ್ನು ಒಂದು ಮಳಿಗೆ ಪ್ರಾರಂಭಿಸಲು ವಸೂಲಿ ಮಾಡುತ್ತಾರೆ. ಜೊತೆಗೆ ನವೀಕರಣಕ್ಕೆ ಪ್ರತ್ಯೇಕವಾಗಿ ಒಂದು ಲP ಕೊಡಬೇಕಾಗಿದೆ ಇದರೊಂದಿಗೆ ಪ್ರತಿ ತಾಲೂಕಿನಲ್ಲೂ ತಿಂಗಳ ಮಾಮೂಲಿಯನ್ನು ಕೊಡಬೇಕಾಗಿದೆ ಕೋಲಾರದಲ್ಲಿ ೧೫ ಸಾವಿರ, ಶ್ರೀನಿವಾಸಪುರ ೧೮, ಮುಳಬಾಗಿಲು ೨೨, ಮಾಲೂರು ೨೮, ಬಂಗಾರಪೇಟೆ ಮತು ಕೆಜಿಎಫ್‌ತಾಲೂಕಿನಲ್ಲಿ ೩೦ ಸಾವಿರವನ್ನು ಪ್ರತಿ ಮಳಿಗೆಯಿಂದ ನೀಡಬೇಕಾಗಿದೆ ಎಂದು ಆರೋಪಿಸಿದರು.
ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಸಾಕಷ ಬಾರಿ ಸರ್ಕಾರದೊಂದಿಗೆ ಅಧಿವೇಶನದಲ್ಲಿ ಹಾಗೂ ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರೂ ಯಾವುದೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿಲ್ಲ. ಗ್ರಾಮೀಣ ಪ್ರದೇಶಗಳ ಹಳ್ಳಿಗಳಲ್ಲಿನ ಸಣ್ಣ ಸಣ್ಣ ಅಂಗಡಿಗಳಲ್ಲಿ ಸಹ ಮದ್ಯ ಮಾರಾಟವಾಗುತ್ತಿದ್ದು ಅನುಮತಿ ಪಡೆದು ಕಳ್ಳರ ರೀತಿಯಲ್ಲಿ ಮಾರಾಟ ಮಾಡಿ ಯುವಕರು ದಾರಿತಪ್ಪುವಂತೆ ಮಾಡಿದ್ದಾರೆ. ಹಣ ಮಾಡುವ ಉದ್ದೇಶದಿಂದ ಜಿಲ್ಲೆಯ ವಾತಾವರಣವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಹಾಳು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಅಧಿವೇಶನದಲ್ಲಿ ಅನಿಲ್ ಕುಮಾರ್ ಆರೋಪಿಸಿದರು.
ಎಂಎಲ್‌ಸಿ ಅನಿಲ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅಬಕಾರಿ ಸಚಿವರು ಸಿಎಲ್ ೭ಗೆ ಅನುಮತಿ ಕೊಡಿಸಲು ಪ್ಯಾಕೇಜ್ ಮತ್ತು ತಾಲೂಕುವಾರು ತಿಂಗಳಿಗೆ ಮಾಮೂಲಿ ಫಿಕ್ಸ್ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ಅದಕ್ಕೆ ಉತ್ತರ ಕೊಡುವುದಕ್ಕೆ ಆಗುವುದಿಲ್ಲ.ಸಾಕ್ಷಿಕೊಟ್ಟರೆ ಸಂಬಂಧಪಟ್ಡ ಅಧಿಕಾರಿಗಳ ವಿರುದ್ದ ಕ್ರಮ ತೆಗೆದು ಕೊಳ್ಳುವುದಾಗಿ ಹೇಳಿದರು.
ಸಚಿವರ ಹೇಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅನಿಲ್ ಕುಮಾರ್ ನಾನು ಒಬ್ಬ ಜವಾಬ್ದಾರಿಯುv ಜನಪ್ರತಿನಿಧಿಯಾಗಿ ಸದನದಲ್ಲಿ ಗಂಭೀರ ಆರೋಪ ಮಾಡುತ್ತಿದ್ದೇನೆ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ನಾನು ಮಾಡುತ್ತಿಲ್ಲ. ಸ್ಪಷವಾಗಿ ಮಾಹಿತಿ ತೆಗೆದುಕೊಂಡು ಮಾತನಾಡುತ್ತಿದ್ದೇನೆ ಎಂದು ಹೇಳಿದರು.