ಮಲ್ಲಾಬಾದ್ ಏತ್ ನೀರಾವರಿ ಯೋಜನೆ ತಕ್ಷಣ ಜಾರಿಗೊಳಿಸಿ:ಇಬ್ರಾಹಿಂಪಟೇಲ ಯಾಳವಾರ
ಜೇವರ್ಗಿ:ಜು.19: ಆದರ್ಶ್ ಗ್ರಾಮ ಸಮಿತಿ ಯಾಳವಾರ ನೇತೃತ್ವದಲ್ಲಿ ಕಳೆದ ವರ್ಷ ಡಿಸೆಂಬರ್ 13 ರಿಂದ ಮಾರ್ಚ್ 07 ರ ತನಕ ನಿರಂತರ 87 ದಿನ ಐತಿಹಾಸಿಕ ಹೋರಾಟದ ಪ್ರತಿಫಲವಾಗಿ ಹಿಂದಿನ ಸರ್ಕಾರ 330 ಕೋಟಿ 40 ಲಕ್ಷ ಮಂಜೂರಾತಿಕೊಟ್ಟಿದೆ.ನಂತರ ನಮ್ಮ ನಮ್ಮ ಹೋರಾಟ ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿತ್ತು.
ಎಂದು ಯಾಳವಾರ ಆದರ್ಶಗ್ರಾಮ ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂಪಟೇಲ ಯಾಳವಾರ ತಿಳಿಸಿದ್ದು ಸದ್ಯಕ್ಕೆ ಸರಕಾರ ಈ ಬಗ್ಗೆ ಜಾಣ ಕುರುಡುತನ ತೋರಿ ಸುಮ್ಮನಿದೆ ಎಂದು ಕಿಡಿಕಾರಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಯಡ್ರಾಮಿಗೆ ಬಂದಾಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆ ಒಳಗಾಗಿ ಮಲ್ಲಾಬಾದತ್ ನೀರಾವರಿ ಕಾಮಗಾರಿ ಟೆಂಡರ್ ಕರೆದು ಕಾಮಗಾರಿ ಮುಗಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದರು.
ಆದರೆ 24 ತಿಂಗಳ ಕಳೆದರೂ ಇಲ್ಲಿಯವರೆಗೂ ಕೂಡ ಈ ಕುರಿತಂತೆ ಚಕಾರ ಎತ್ತಿಲ್ಲಾ. ನಮ್ಮ ಶಾಸಕರಾದ ಡಾ. ಅಜಯ್ ಸಿಂ???ವರಿಗೆ ರೈತರ ಅಭಿವೃದ್ಧಿ ಬೇಕಿಲ್ಲಾ. ದಿ.ಧರ್ಮಸಿಂಗ್ ಹಾಗೂ ಅವರ ಸುಪುತ್ರರರು ನಲವತ್ತು ವರ್ಷಗಳ ಕಾಲ ತಾಲೂಕಿನ ಅಭಿವೃದ್ಧಿ ಸಂಪೂರ್ಣ ಕಡೆಗಣಿಸಿದ್ದಾರೆ,
ರೈತರ ಅಭಿವೃದ್ಧಿ ಸಾರ್ವಜನಿಕರ ಅಭಿವೃದ್ಧಿ ಯಾವ ಕಾರಣಕ್ಕೂ ಕೂಡ ಅವರಿಗೆ ಇವರಿಗೆ ಬೇಕಿಲ್ಲಾ,ಸ್ವಾರ್ಥಕ್ಕಾಗಿ ತಮ್ಮ ಅಧಿಕಾರಕ್ಕಾಗಿ ಬಡದಾಡ್ತಿರುವುದನ್ನು ಜನರು ಗಮನಿಸುತ್ತಿದ್ದಾರೆ. ತಾಲೂಕಿನ ಪ್ರತಿನಿಧಿಯಾಗಿ ಕೆ.ಕೆ.ಆರ್ ಡಿ.ಬಿ ಅಧ್ಯಕ್ಷರಾದರೂ ಸಹ ಜನ ಹಿತ ಬಯಸುವ ಬದಲು ಸಾರ್ವಜನಿಕರಿಗೆ ರೈತರಿಗೆ ಘೋರ ಅನ್ಯಾಯ ಮಾಡಿ ಕತ್ತು ಹಿಸುಕುವಂತ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ,ಕೂಡಲೇ ಎಚ್ಚೆತ್ತುಕೊಂಡು ಟೆಂಡರ್ ಕರೆದು ಮಲ್ಲಾಬಾದ ಏತನೀರಾವರಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ನಾವುಗಳು ಇಡೀ ತಾಲೂಕಿನ್ಯಾದಂತೆ ಪ್ರತಿ ಗ್ರಾಮಗಳಿಗೆ ಭೇಟಿಕೊಟ್ಟು ನಿಮ್ಮ ದುರಾಲೋಚನೆ ಸಾರ್ವಜನಿಕರ ಮುಂದೆ ತಂದು ನಿಮ್ಮನ್ನು ಘೇರಾವ್ ಮಾಡಬೇಕಾಗುತ್ತದೆ.ಅಲ್ಲದೆ ನೀವು ತಾಲೂಕಿಗೆ ಬರೆದಂತೆ ಮುಖ್ಯ ರಸ್ತೆಗಳು ಬಂದ್ ಮಾಡುವ ಮುಖಾಂತರ ನಮ್ಮ ಸಂವಿಧಾನ ಬದ್ದ ಹಕ್ಕು ಪಡೆಯುತ್ತೇವೆ.ನ್ಯಾಯ ದೂರೆಯುವರೆಗೂ ನಾವು ಸುಮ್ಮನೆ ಕುಳಿತುಕೊಳ್ಳುವದಿಲ್ಲ ಎಂದು ಯಾಳವಾರ ಆದರ್ಶಗ್ರಾಮ ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂಪಟೇಲ ಯಾಳವಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.