ಬಿರಾಳ ರಸ್ತೆ ಸ್ವಚ್ಚಗೊಳಿಸಲು ಆಗ್ರಹ
ಜೇವರ್ಗಿ:ಜು.19: ತಾಲೂಕಿನ ಬಿರಾಳ ಕೆ.ಗ್ರಾಮದ ಕುಡಿಯುವ ನೀರಿನ ಭಾವಿಯ ರಸ್ತೆ ಸಂಪೂರ್ಣವಾಗಿ ಕೆಸರುಗದ್ದೆಯಾಗಿದೆ ಈ ರಸ್ತೆಯ ಮುಖಾಂತರವೇ ಬಿರಾಳ ಕೆ ಗ್ರಾಮದವರು ಕುಡಿಯುವ ನೀರು ತರಬೇಕು. ಗ್ರಾಮದ ಗರ್ಭಿಣಿ ಮಹಿಳೆಯರು,ವೃದ್ದರು,ಈ ರಸ್ತೆಯ ಮೂಲಕವೇ ಕೊಡಗಳನ್ನು ಹೊತ್ತು ನೀರ ತರಬೇಕು ಕೆಲವು ವೃದ್ದರು ಈ ಕೆಸರಲ್ಲಿ ಕಾಲು ಜಾರಿಬಿದ್ದಿದ್ದಾರೆ ಸ್ಥಳೀಯ ಜನಪ್ರತಿನಿಧಿಗಳು ಪಂಚಾಯತ ಅಭಿವೃದ್ಧಿ ಅಧಿಕಾರಿಯ ಗಮನಕ್ಕೆ ತಂದರೂ ಸಹ ಪಂಚಾಯತ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ ತೋರುತ್ತಿದ್ದಾರೆ ಈ ಅಭಿವೃದ್ಧಿ ಅಧಿಕಾರಿ ಕೇವಲ ಉದ್ಯೋಗ ಖಾತರಿ ಬೋಗಸ್ ಹಾಜರಿ ಹಾಕುವುದೇ ಅವರ ಕೆಲಸವಾಗಿದೆ.ಪಂಚಾಯತ ಅಭಿವೃದ್ಧಿ ಅಧಿಕಾರಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ತಕ್ಷಣವೇ ಈ ರಸ್ತೆಯನ್ನು ಸ್ವಚ್ಚಗೊಳಿಸಬೇಕೆಂದು ಸರ್ಕಾರಕ್ಕೆ ಸಾಮಾಜಿಕ ಹೋರಾಟಗಾರ ಪರಮೇಶ್ವರ ನಾಯಕ ಬಿರಾಳ ಆಗ್ರಹಿಸಿದ್ದಾರೆ