ಭಾಷೆಗಳ ಯೋಜನಾಬದ್ಧ ಅಧ್ಯಯನ ನಡೆಯಬೇಕು
ಸಂಜೆವಾಣಿ ನ್ಯೂಸ್
ಮೈಸೂರು: ಜು.19:- ದೇಶದಲ್ಲಿನ ಭಾಷೆಗಳೇ ಪರಂಪರಾಗತ ಶಕ್ತಿಗಳಾಗಿದ್ದು, ಅವುಗಳ ಅಧ್ಯಯನ ಯೋಜನಾಬದ್ಧವಾಗಿ ನಡೆಯಬೇಕಿದೆ. ಅದಕ್ಕೆ ಕೃತಕ ಬುದ್ದಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನದ ನೆರವು ಪಡೆಯಬೇಕಿದೆ ಎಂದು ಎಂದು ವೈಜ್ಞಾನಿಕ ಹಾಗೂ ತಾಂತ್ರಿಕ ಆಯೋಗದ ಅಧ್ಯಕ್ಷ (ಸಿಎಸ್‍ಟಿಟಿ) ಪೆÇ್ರ.ಗಿರೀಶ್‍ನಾಥ್ ಝಾ ಪ್ರತಿಪಾದಿಸಿದರು.
ನಗರದ ಭಾರತೀಯ ಭಾಷಾ ಸಂಸ್ಥಾನದಲ್ಲಿ ಆಯೋಜಿಸಿದ್ದ 56ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಜ್ಞಾನ ವ್ಯವಸ್ಥೆ ಭಾಷೆಗಳಲ್ಲಿ ಅಡಗಿದೆ. ಹೀಗಾಗಿ ಬಹುಭಾಷೀಯ ದೇಶಕ್ಕೆ ಭಾಷಾ ವಿಜ್ಞಾನದ ಅಧ್ಯಯನ ಹಾಗೂ ಯೋಜನೆಗಳು ಎಚ್ಚರಿಕೆಯಿಂದ ನಡೆಯಬೇಕಿವೆ. ಭಾರತದಲ್ಲಿ ಕೃತಕ ಬುದ್ಧಿಮತ್ತೆ ಅಭಿವೃದ್ಧಿ ಇಲ್ಲಿನ ಭಾಷಾ ದತ್ತಾಂಶವನ್ನು ಅವಲಂಬಿಸಿದೆ ಎಂದು ಹೇಳಿದರು.
ವೇದಾಂಗಗಳಾದ ಶಿಕ್ಷ, ಕಲ್ಪ, ವ್ಯಾಕರಣ, ನಿರುಕ್ತ, ಛಂದ ಹಾಗೂ ಜ್ಯೋತಿಷದಲ್ಲಿ ನಾಲ್ಕು ಅಂಗಗಳು ಭಾಷೆಗೆ ಸಂಬಂಧಿಸಿವೆ. ಭಾರತದ ಎಲ್ಲ ಜ್ಞಾನವಾಹಿನಿಗಳು ಭಾಷೆಯನ್ನೇ ಅವಲಂಬಿಸಿವೆ ಎಂದು ಉದಾಹರಿಸಿದರು.
ಭಾಷೆ ದಾಖಲೀಕರಣ ಆಗುತ್ತಲೇ ಜೊತೆಯಲ್ಲಿ ವಿಶ್ಲೇಷಣೆ, ದೃಶ್ಯೀಕರಣ ಆಗಬೇಕಿದೆ. ದತ್ತಾಂಶ ಸಂಗ್ರಹವು ಸರಳವಾಗಿರಬೇಕು. ತಂತ್ರಜ್ಞಾನಕ್ಕೆ ನೆರವಾಗುವಂತಿರಬೇಕು ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ಭಾಷೆಗಳಲ್ಲಿ ಪದಕೋಶ ರಚಿಸುವ ಕೆಲಸದಲ್ಲಿ ಸಿಎಸ್‍ಟಿಟಿ ನಿರತವಾಗಿದೆ. ಹಿಂದಿ-ಇಂಗ್ಲಿಷ್-ಕನ್ನಡ ಮೂರು ಭಾಷೆಗಳಲ್ಲಿ ಪದಕೋಶ ರೂಪಿಸುವ ಯೋಜನೆ ಅನುಷ್ಠಾನಗೊಳಿಸಿದೆ ಎಂದು ತಿಳಿಸಿದರು.
ವಿಜ್ಞಾನ-ತಂತ್ರಜ್ಞಾನದ ವಿಷಯಗಳಲ್ಲಿ ಬಳಸುವ ಇಂಗ್ಲಿಷ್ ಪದಗಳಿಗೆ ಸಮಾನಾರ್ಥಕ ಪದ ಹುಡುಕುವ ಅಥವಾ ಸೂಚಿಸುವ ಕಾರ್ಯಕ್ಕೆ ವಿವಿಧ ರಾಜ್ಯಗಳ ವಿವಿಧ ಪದವಿ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರನ್ನು ಬಳಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ನೀತಾ ಪ್ರಸಾದ್ ಮಾತನಾಡಿ, ಎರಡು ದಶಕದ ಹಿಂದಿದ್ದ ಬೋಧನೆ, ಕಲಿಕೆ, ಅಧ್ಯಯನ ಕ್ರಮಗಳು ಬದಲಾಗಿವೆ. ಮುಂದಿನ 20 ವರ್ಷದಲ್ಲೂ ಈಗಿನ ಮಾದರಿ ಇರುವುದಿಲ್ಲ. ಹೀಗಾಗಿ ಭಾಷಾ ವಿಜ್ಞಾನಿಗಳಿಗೆ ಸವಾಲುಗಳಿವೆ ಎಂದರು.
ದೇಶವನ್ನು ಸಜ್ಜುಗೊಳಿಸಲು ಉತ್ತಮ ಸಂಶೋಧಕರು, ಭಾಷಾ ವಿಜ್ಞಾನಿಗಳು, ಅನುವಾದಕರು ಸೇರಿದಂತೆ ಮಾನವ ಸಂಪನ್ಮೂಲವನ್ನು ಭಾರತೀಯ ಭಾಷಾ ಸಂಸ್ಥಾನ ನೀಡಬೇಕಿದೆ ಎಂದು ಹೇಳಿದರು.
ಪ್ರಾದೇಶಿಕ ಭಾಷೆಗಳಲ್ಲಿಯೇ ಪ್ರಾಥಮಿಕ ಶಿಕ್ಷಣ ದೊರೆಯಬೇಕೆಂದು ರಾಷ್ಟ್ರೀಯ ಶಿಕ್ಷಣ ನೀತಿ 2020 ಪ್ರತಿಪಾದಿಸುತ್ತದೆ. ಸಂಸ್ಥೆಯು ದೇಶದ ಭಾಷೆಗಳ ದಾಖಲೀಕರಣ, ಅಭಿವೃದ್ಧಿ, ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದು, ಅದರ ಕೊಡುಗೆಯು ಮುಖ್ಯವಾಗಿದೆ ಎಂದು ಹೇಳಿದರು.
ವರ್ಚ್ಯುವಲ್ ಮೂಲಕ ರಾಷ್ಟ್ರೀಯ ಪುಸ್ತಕ ಮಂಡಳಿ (ಎನ್‍ಬಿಟಿ) ನಿರ್ದೇಶಕ ಕರ್ನಲ್ ಯುವರಾಜ್ ಮಲಿಕ್, ಮಾತನಾಡಿದರು.
ಸಂಸ್ಥೆಯ ನಿರ್ದೇಶಕ ಪೆÇ್ರ.ಶೈಲೇಂದ್ರ ಮೋಹನ್, ಉಪ ನಿರ್ದೇಶಕರಾದ ಪೆÇ್ರ.ಉಷಾರಾಣಿ, ಪೆÇ್ರ.ಧರ್ಮೇಶ್ ಫರ್ನಾಂಡಿಸ್ ಹಾಜರಿದ್ದರು.