ಹೂವಿನ ಕೃಷಿಗೆ ಅತ್ಯುತ್ತಮ ಪ್ರೆಸೆಂಡೆಷನ್ ಪ್ರಶಸ್ತಿ ಪಡೆದ ವತ್ಸಲ
ಸಂಜೆವಾಣಿ ವಾರ್ತೆ
ಹನೂರು ಜು 19 :- ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಗಾರದಲ್ಲಿ “ಹೂವಿನ ಕೃಷಿ” ವಿಷಯದ ಬಗ್ಗೆ ಎಂ.ವತ್ಸಲ ರವರು ಮಂಡನೆ ಮಾಡಿದ ಬಿಜಿನೆಸ್ ಪ್ಲಾನ್ ಪ್ರೆಸಿಡೆಷನ್ ಅನ್ನು ಗುರುತಿಸಿ ಅತ್ಯುತ್ತಮ ಪ್ರೆಸೆಂಟೇಷನ್ ಎಂದು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದ ವತ್ಸಲ ಎಂ. ಎಂಬವರು “ಹೂವಿನ ಕೃಷಿ “ಕುರಿತು ಮಂಡಿಸಿದ ಬಿಸಿನೆಸ್ ಪ್ಲಾನ್ ಪ್ರೆಸೆಂಟೇಷನ್ ಅನ್ನು ಅತ್ಯುತ್ತಮ ಪ್ರೆಸೆಂಟೇಶನ್ ಎಂದು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿರುವುದು ಚಾಮರಾಜನಗರ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.
ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ “ಮಹಿಳಾ ಉದ್ಯಮಶೀಲತೆ ತರಬೇತಿ”ಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು.
ಈ ತರಬೇತಿಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ 300 ಮಹಿಳಾ ಪದವೀಧರರು ಅರ್ಜಿಯನ್ನು ಸಲ್ಲಿಸಿದ್ದು ಇದಕ್ಕೆ ಐ.ಎ.ಎಂ. ಬಿ ಬೆಂಗಳೂರು. ವತಿಯಿಂದ ಪರೀಕ್ಷೆಯನ್ನು ನಡೆಸಲಾಗಿತ್ತು.
ಈ ಪರೀಕ್ಷೆಯಲ್ಲಿ ಕೇವಲ 50 ಮಹಿಳಾ ಪದವೀಧರರು ತೇರ್ಗಡೆಯನ್ನು ಹೊಂದಿದ್ದು, ಚಾಮರಾಜನಗರ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಪದವೀಧರೆ ವತ್ಸಲ ಅವರಾಗಿದ್ದಾರೆ. ಇವರಿಗೆ ಐ.ಎ.ಎಂ.ಬಿ. ಬೆಂಗಳೂರು. ಸಂಸ್ಥೆಯಿಂದ ತರಬೇತಿಯನ್ನು ನೀಡಲಾಗಿದ್ದು.
ಮಾರ್ಚ್ 18ರಿಂದ ಜುಲೈ 2ರ ತನಕ ತರಬೇತಿಯನ್ನು ನೀಡಲಾಗಿತ್ತು. ಜುಲೈ ಒಂದು ಮತ್ತು ಎರಡನೇ ತಾರೀಕಿನಂದು ಬಿಸಿನೆಸ್ ಪ್ಲಾನ್ ಪ್ರೆಸೆಂಟೇಷನನ್ನು ಮಂಡನೆ ಮಾಡಲಾಗಿತ್ತು. ವತ್ಸಲ ಅವರು “ಹೂವಿನ ಕೃಷಿ” ಕುರಿತು ಮಂಡಿಸಿದ ಬಿಸಿನೆಸ್ ಪ್ಲಾನ್ ಪ್ರೆಸೆಂಟೇಷನ್ ಅನ್ನು ಮಂಡಿಸಿದ್ದಾರೆ.
ಅತ್ಯುತ್ತಮ ಪ್ರೆಸೆಂಟೇಷನ್ ಪ್ರಶಸ್ತಿಯನ್ನು ಪಡೆದಿರುವ ವತ್ಸಲ ಅವರು ಈ ತರಬೇತಿಯನ್ನು ನೀಡಿದ ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ ಹಾಗೂ ಐ.ಎ.ಎಂ.ಬಿ. ಬೆಂಗಳೂರು. ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.