ಸಾಯಿಬಾಬಾ ಮಂದಿರದಲ್ಲಿ ಎಂಟನೇ ವರ್ಷದ ಗುರು ಪೂರ್ಣಿಮೆ
ಸಂಜೆವಾಣಿ ವಾರ್ತೆ
ಹರಿಹರ ಜು 18; ಪಟೇಲ್ ಬಡಾವಣೆ ಕೇಶವ ನಗರದಲ್ಲಿರುವ ಇರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಜು 21ರ ಭಾನುವಾರ ಗುರುಪೂರ್ಣಿಮೆಯ ಪ್ರಯುಕ್ತ  ಬೆಳಗ್ಗೆ 6:30ಕ್ಕೆ ಶ್ರೀ ಸಿದ್ಧಿ ವಿನಾಯಕ ಶ್ರೀ ಸಾಯಿಬಾಬಾರವರ ಮೂರ್ತಿ ಶ್ರೀ ಕಾಶಿ ವಿಶ್ವನಾಥ ಹಾಗೂ ನವಗ್ರಹ ಬಸವಣ್ಣನವರ ಮೂರ್ತಿಗಳಿಗೆ ವರುಣ ಕೃಪೆಗಾಗಿ   ಲೋಕ ಕಲ್ಯಾಣಾರ್ಥ ಸಾರ್ವಜನಿಕರಿಂದ ಕ್ಷೀರಭಿಷೇಕ ವಿಶೇಷ ಅಲಂಕಾರ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಲಾಗಿದೆ  ಅಂದು ಮಧ್ಯಾಹ್ನ 12:30 ಕ್ಕೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಇರುತ್ತದೆ  ಆದಕಾರಣ ಸಮಸ್ತ ಭಕ್ತ ವೃಂದದವರು ತನು ಮನದೊಂದಿಗೆ ಸಹಕರಿಸಿ ಪೂಜೆಯಲ್ಲಿ ಭಾಗವಹಿಸಿ ಶ್ರೀ ಶಿರಡಿ ಸಾಯಿಬಾಬಾ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.ವಿಶೇಷ ಸೂಚನೆ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕ್ಷೀರಭಿಷೇಕದಲ್ಲಿ ಪಾಲ್ಗೊಳ್ಳುವರು  251 ರೂ ಪಾವತಿಸಿ ರಸಿದಿ ಪಡೆಯತಕ್ಕದ್ದು ಗುರುಪೂರ್ಣಿಮೆ ವಿಶೇಷ ಪೂಜೆಯಲ್ಲಿ ಸರ್ವಭಕ್ತ ವೃಂದದವರು ಭಾಗವಹಿಸಿ ಶಿರಡಿ ಸಾಯಿಬಾಬಾ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮತಿ ಗಂಗಮ್ಮ ಪಟೇಲ್ ಮಲ್ಲಪ್ಪ ಸೇವಾ ಟ್ರಸ್ಟ್ ಕಮಿಟಿಯ ಆಡಳಿತ ಮಂಡಳಿಯ ಅಧ್ಯಕ್ಷರು ಸದಸ್ಯರುಗಳು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.