ಕುಂಬಾರವಾಡಾ ಶ್ರೀ ಮಾತಾ ಕಾಳಿಕಾದೇವಿ ಭವಾನಿ ಮಂದಿರದಲ್ಲಿ ಅ.3ರಿಂದ ನವರಾತ್ರಿ ಉತ್ಸವ
ಬೀದರ :ಸೆ.28: ನಗರದ ಕುಂಬಾರವಾಡಾದಲ್ಲಿರುವ ಶ್ರೀ ಮಾತಾ ಕಾಳಿಕಾದೇವಿ ಭವಾನಿ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಕ್ಷೇತ್ರದಲ್ಲಿ ನವರಾತ್ರಿ ಉತ್ಸವವು ದಿನಾಂಕ 3-10-2024ರ ಗುರುವಾರದಿಂದ 12-10-2024ರ ಶನಿವಾರದ ವರೆಗೆ ಆಚರಿಸಲಾಗುತ್ತಿದ್ದು, ದಿನತಿತ್ಯ ಬೆಳಿಗ್ಗೆ ಹಾಗೂ ರಾತ್ರಿ ಪೂಜಾ, ಅರ್ಚನಾ, ಆರತಿ ನಡೆಯಲ್ಲಿದ್ದು, ಸದ್ಭಕ್ತರು ಮಾತೆ ದರ್ಶನ ಪಡೆಯಬಹುದು ಎಂದು ಶ್ರೀ ಮಾತಾ ಕಾಳಿಕಾದೇವಿ ಭವಾನಿ ಮಂದಿರ, ಕುಂಬಾರವಾಡಾ ಕ್ಷೇತ್ರದ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿ: 07-10-2024ರಂದು ಸೋಮವಾರ ಶ್ರೀಮತಿ ಪುಣ್ಯಾವತಿಬಾಯಿ ಕೊಂಡಿ ಇವರ ಅಮೃತ ಹಸ್ತದಲ್ಲಿ ಘಟಸ್ಥಾಪನಾ ನಡೆಯಲ್ಲಿದ್ದು, ದಿ: 11-10-2024 ಶುಕ್ರವಾರ ರಾತ್ರಿ 12ಗಂಟೆಯ ವರೆಗೆ ಅನುಷ್ಠಾನ ಕುಳಿತುಕೊಳ್ಳುವರು. ದಿ: 10-10-2024 ಗುರುವಾರದಂದು ಶ್ರಿಮತಿ ರಾಣಿ ಸತ್ಯಮೂರ್ತಿ ನಿರ್ದೇಶನ ಇವರ ನೇತೃತ್ವದಲ್ಲಿ ರಾತ್ರಿ 6ಗಂಟೆಗೆ ಭರತನಾಟ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಿ:12-10-2024 ರಂದು ಶನಿವಾರದಂದು ವಿಜಯದಶಮಿ (ದಸರಾ) ದಿನದಂದು ಶ್ರೀ ಮಾತಾ ಕಾಳಿಕಾದೇವಿ ಪಾಲಕಿ, ಮಧ್ಯಾಹ್ನ 2ಗಂಟೆಗೆ ಕುಂಬಾರವಾಡಾ ಮಂದಿರದಿಂದ ಪ್ರರಂಭವಾಗಿ ಹೂಗೇರಿ ಕ್ಷೇತ್ರದಿಂದ ಎಸ್.ಪಿ ಬಂಗಲಾ, ಹೈದ್ರಾಬಾದ್ ರಸ್ತೆ, ಶ್ರೀ ಹನುಮಾನ ದೇವಸಾಸ್ಥ ದರ್ಶನ ಪಡೆದು, ಪುನಃ ಲಾಲವಾಡಿ ಕ್ಷೇತ್ರದಿಂದ ರಾತ್ರಿ 10ಗಂಟೆಗೆ ಕುಂಬಾರವಾಡಾ ಕ್ಷೇತ್ರಕ್ಕೆ ತಲುವುದು ಈ ಮೆರವಣಿಗೆಯಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುತ್ತದೆ.
ದಿ: 17-10-2024ರಂದು ಗುರುವಾರ ಕೋಜಗಿರಿ ಪೂರ್ಣಿಮಾ ದಿನದಂದು ಬೆಳಿಗ್ಗೆ 5 ಗಂಟೆಯಿಂದ 11 ಗಂಟೆಯ ವರೆಗೆ ಹಾಲು, ಮೊಸರು, ಸಕ್ಕರೆ, ತುಪ್ಪ ಇವುಗಳಿಂದ ಶ್ರೀ ಮಾತಾ ಅಭಿಷೇಕ ನಡೆಯುತ್ತದೆ. ಆದ್ದರಿಂದ ಭಕ್ತಾಧಿಗಳು ತಮ್ಮ ಅಮೃತ ಹಸ್ತದಿಂದ ಅಭಿಷೇಕ ಮಾಡಲು ಇದು ಒಂದೇ ದಿನ ತಮಗೆ ಗರ್ಭಗುಡಿಯಲ್ಲಿ ಅವಕಾಶ ಇರುವುದು. ಹಾಗೂ ಸಂಜೆ 5ಗಂಟೆಯಿಂದ ರಾತ್ರಿ 11ಗಂಟೆಯ ವರೆಗೆ ಮಹಾ ಪ್ರಸಾದದ ವ್ಯವಸ್ಥೆ ಇರುತ್ತದೆ. ಸಮಸ್ತ ಸದ್ಭಕ್ತರು ಇದರಲ್ಲಿ ಭಾಗವಹಿಸಿ ಶ್ರೀ ಮಾತಾ ಕಾಳಿಕಾದೇವಿ ಭವಾನಿ ದೇವಿಯ ದರ್ಶನ ಪಡೆಯಲು ಶ್ರೀ ಮಾತಾ ಕಾಳಿಕಾದೇವಿ ಭವಾನಿ ಮಂದಿರ, ಕುಂಬಾರವಾಡಾ ಕ್ಷೇತ್ರದ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.