ಮುಂದುವರೆದ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ: ಬಿಕೋ ಎನ್ನುತ್ತಿದೆ ಕಛೇರಿ, ಸಾರ್ವಜನಿಕರ ಪರದಾಟ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.28: ರಾಜ್ಯ ಸಂಘದ ಕಾರ್ಯಕಾರಿ ಸಮಿತಿ ತೀರ್ಮಾನದಂತೆ ಗ್ರಾಮ ಆಡಳಿತಾಧಿಕಾರಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮೂರನೇ ದಿನವು ಗ್ರಾಮಡಳಿತಾಧಿಕಾರಿಗಳಿಂದ ಮುಷ್ಕರವು ಮುಂದುವರೆದಿದೆ.
ಗ್ರಾಮ ಆಡಳಿತಾಧಿಕಾರಿಗಳ ತಮ್ಮ ಬೇಡಿಕೆ ಈಡೇರಿಸುವಂತೆ ತಾಲೂಕು ಕೇಂದ್ರಗಳಲ್ಲಿ ಸೆಪ್ಟೆಂಬರ್ 26 ರಂದು ಮುಷ್ಕರ ಕೈಗೊಳ್ಳಲಾಗಿದೆ ಜಿಲ್ಲಾ ಕೇಂದ್ರಗಳಲ್ಲಿ ಸೆಪ್ಟೆಂಬರ್ 27 ರಂದು ಮತ್ತು ಇಂದು ಸಿರುಗುಪ್ಪ ತಾಲೂಕಿನ 60 ಗ್ರಾಮ ಆಡಳಿತಾಧಿಕಾರಿಗಳು ಜಿಲ್ಲಾ ಕೇಂದ್ರಗಳಲ್ಲಿ ಕೈ ಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ಮಾಡಿದರು.
ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆ ಮೊಬೈಲ್ ತಾಂತ್ರಂಶಗಳ ಕೆಲಸ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲಾ ಅಮಾನತ್ತುಗಳನ್ನು ತಕ್ಷಣವೇ ರದ್ದುಪಡಿಸಿ, ಹಿಂಪಡೆಯಬೇಕು, ಆಹಾರ ಇಲಾಖೆಯ ಕೆಲಸಗಳನ್ನು ಕಂದಾಯ ಇಲಾಖೆಗೆ ನಿರ್ವಹಿಸಲು ಆದೇಶಿಸುತ್ತಿರುವುದರಿಂದ  ಈ ಹಿಂದಿನಂತೆ ಆಹಾರ ಇಲಾಖೆ ಆಹಾರ ನಿರೀಕ್ಷಕರು ಹುದ್ದೆಗೆ ಪದೋನ್ನತಿಯನ್ನು ನೀಡುವ ಬಗ್ಗೆ, ಆಯುಕ್ತಾಲಯದ ಅಡಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಜೇಷ್ಠತೆಯನ್ನು ರಾಜ್ಯ ಮಟ್ಟದ ಜೇಷ್ಠತೆಯನ್ನಾಗಿ ಪರಿಗಣಿಸುವ ಬಗ್ಗೆ, ಮನೆಹಾನಿ ಪ್ರಕರಣಗಳ ಜವಾಬ್ದಾರಿಯಿಂದ ಗ್ರಾಮ ಆಡಳಿತ
ಅಧಿಕಾರಿಗಳನ್ನು ಕೈಬಿಡಬೇಕು, ಅನ್ಯ ಇಲಾಖೆಯ ಕೆಲಸ ನಿರ್ವಹಿಸದಂತೆ ಸೂಕ್ತ ಆದೇಶ ನೀಡುವ ಬಗ್ಗೆ, ಮ್ಯುಟೇಷನ್ ಅವಧಿ ದಿನವನ್ನು ವಿಸ್ತರಣೆ ಮಾಡುವ ಬಗ್ಗೆ, ಮೊಬೈಲ್ ಆ್ಯಪ್ ಹಾಗೂ ವೆಬ್ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಲಾಗಿದೆ ಹಾಗೂ ಇನ್ನೂ ಮುಂತಾದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ರಾಜ್ಯವ್ಯಾಪಿ ಕೈಗೊಳ್ಳಲಾಗಿದೆ.
ಗ್ರಾಮ ಆಡಳಿತಧಿಕಾರಿಗಳ ಮುಷ್ಕರ ಕಛೇರಿಗಳು ಬಿಕೋ ಬಿಕೋ: ರಾಜ್ಯಾದ್ಯಂತ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಕೈಗೊಳ್ಳಲಾಗಿದ್ದು ಕಛೇರಿ ಬಂದ್ ಮಾಡಿಕೊಂಡು ಪ್ರತಿಭಟನೆ ಮಾಡುತ್ತಿರುವುದು ಕಛೇರಿಯಲ್ಲಿ ಖಾಲಿ ಖಾಲಿ ಚೇರ್ ಗಳು ಕಾಣಿಸುತ್ತಿರುವುದು ಇದರಿಂದ ಸಾರ್ವಜನಿಕರಿಗೆ  ತೊಂದರೆ ಆಗುತ್ತಿದು ಗ್ರಾಮ ಆಡಳಿತಾಧಿಕಾರಿಗಳ ಕಛೇರಿಗೆ ಬರುವ ಸಾರ್ವಜನಿಕರು ತಮ್ಮ ಜಾತಿ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ವಂಶವೃಕ್ಷ, ಪಹಣಿ ದಾಖಲೆ, ಮ್ಯುಟೇಷನ್ ಕಾಫಿ, ತೆಗೆದುಕೊಳ್ಳಲು  ಹಳ್ಳಿಗಳಿಂದ ಬರುವ ಸಾರ್ವಜನಿಕರು ಮಾಹಿತಿ ಇಲ್ಲದೆ ಕಛೇರಿಯಲ್ಲಿ ಬಂದು ನೋಡಿದರೆ ಯಾವ ಒಬ್ಬ ಸಿಬ್ಬಂದಿಗಳು ಇಲ್ಲದೆ ಇರುವುದು ಸಾರ್ವಜನಿಕರು ನೋಡಿ ಹೋಗುತ್ತಿರುವುದು,
ಇನ್ನು ಕೇಲವರು ಕಛೇರಿಯ ಮುಂದೆ ಕುಳಿದು ಅಧಿಕಾರಿಗಳ ಬರುವಿಕೆಗಾಗಿ ಕಾದು ಕುಳಿತ್ತಿರುವುದು. ಗ್ರಾಮ ಆಡಳಿತಾಧಿಕಾರಿಗಳ ಕಛೇರಿ ಜನಜಂಗುಳಿ ಇರುವ ಕಛೇರಿ ಕಳೆದ ಮೂರು ದಿನಗಳಿಂದ ಕಛೇರಿ ಸಂಪೂರ್ಣ ಬಿಕೋ ಎನ್ನುತ್ತಿವೆ.