ಹತ್ತು ವರ್ಷಗಳಿಂದ ಉಚಿತ ನೋಟ್ ಬುಕ್ ವಿತರಣೆ
ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.28: ಪಟ್ಟಣದ  ತುಂಬರಗುದ್ದಿ ಚಾರಿಟೇಬಲ್ ಟ್ರಸ್ಟ್ (ರಿ) ನ ಭೌತಶಾಸ್ತ್ರ ನಿವೃತ್ತ ಸಹ ಪ್ರಾಧ್ಯಾಪಕರಾದ ಸತೀಶ್ ಅವರು ಹತ್ತು ವರ್ಷಗಳಿಂದ  ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ  ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಪೆನ್ನು, ಬಿಸ್ಕತ್ ವಿತರಣೆ ಮಾಡುತ್ತಾ ಬಂದಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ.
ತಾಲೂಕಿನ ಹ್ಯಾಳ್ಯಾ ಗ್ರಾಮದ ಸರಕಾರಿ  ಪ್ರೌಢಶಾಲೆ ಶಾಲೆಯಲ್ಲಿ ಓದುತ್ತಿರುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಲೇಖನಿ ಹಾಗೂ ಬಿಸ್ಕತ್ ಗಳನ್ನು ಕೊಡುಗೆಯಾಗಿ ನೀಡಿದರು.
ನಂತರ ಟಿ. ಸತೀಶ್ ಮಾತನಾಡಿ, ಈ ಸೇವೆಯನ್ನು ಸತತ 10 ವರ್ಷಗಳಿಂದಲೂ ಕೊಟ್ಟೂರು ತಾಲೂಕಿನಾದ್ಯಂತ ವಿವಿಧ ಶಾಲೆಗಳಿಗೆ ಪ್ರತಿ ವರ್ಷ  1 ಲಕ್ಷ ರೂ ಮೌಲ್ಯದ ಪುಸ್ತಕ, ಲೇಖನಿ, ಹಾಗೂ ಬಿಸ್ಕೆಟ್ ಗಳನ್ನು ನೀಡುತ್ತಾ ಬಂದಿದ್ದೇನೆ.
ನಾವು ಗಳಿಸಿದ ಹಣದಲ್ಲಿ ಸ್ವಲ್ಪ ವಿದ್ಯಾರ್ಥಿಗಳಿಗಾಗಿ ದಾನ ಮಾಡಿದರೆ ನಮಗೇನು ನಷ್ಟವಾಗುವುದಿಲ್ಲ. ನಮ್ಮಲ್ಲಿರುವ ಹೆಚ್ಚಿನ ಹಣವನ್ನು ಹೇಗೆ ಬೇಕಾದರೂ ತಿಂದು ಕುಡಿದು ಖರ್ಚು ಮಾಡಬಹುದು. ಇದರಿಂದ ನಮಗೆ ಸಾಕಷ್ಟು ರೋಗಗಳು ಬರಬಹುದು ಆದರೆ ಈ ರೀತಿ  ಬಡ ವಿದ್ಯಾರ್ಥಿಗಳಿಗೆ ದಾನ ಮಾಡಿದರೆ ಆತ್ಮತೃಪ್ತಿ ಸಿಗುವುದು ಎಂದು ಹೇಳಿ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ  ಕೆ. ಶರಣಪ್ಪ, ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.