ವಿದ್ಯುತ್ ತಂತಿ ತಗುಲಿ ಮಹಿಳೆ ಸಾವು
ಕಲಬುರಗಿ:ಜು.18: ಕುರಿ ಮೇಯಿಸಲು ಹೋದ ಮಹಿಳೆಗೆ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಚಿಂಚೋಳಿ ತಾಲ್ಲೂಕಿನ ಇಂದ್ರಪಾಡ್ ಹೊಸಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಮೃತಳನ್ನು ಶ್ರೀಮತಿ ಕಲ್ಲಮ್ಮ ಬಸಪ್ಪ ಹೆಳವರ್ (35) ಎಂದು ಗುರುತಿಸಲಾಗಿದೆ.
ಕಲ್ಲಮ್ಮ ಹೆಳವರ್ ಕುರಿ ಮೇಯಿಸಲು ಹೋದಾಗ ವಿದ್ಯುತ್ ತಂತಿಯೊಂದು ಬಿದ್ದಿದ್ದು, ಅದನ್ನು ಗಮನಿಸದೇ ತಂತಿಯನ್ನು ತುಳಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಳು ಎನ್ನಲಾಗಿದೆ. ಸುದ್ದಿ ತಿಳಿದು ಜೆಸ್ಕಾಂ ಹಾಗೂ ಪೋಲಿಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಸುಲೇಪೇಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.