ನಾಲ್ವರ ಬಂಧಿಸಿ 14 ಮೊಬೈಲ್ ಜಪ್ತಿ
ಕಲಬುರಗಿ,ಜು.18-ಸಿಸಿಬಿ ಘಟಕದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿ 42 ಸಾವಿರ ರೂ.ಮೌಲ್ಯದ 14 ಮೊಬೈಲ್, 25 ಸಾವಿರ ರೂ.ಮೌಲ್ಯದ ಬೈಕ್ ಜಪ್ತಿ ಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನವಾದ ಮೊಬೈಲ್‍ಗಳನ್ನು ಪತ್ತೆ ಹಚ್ಚಲು ನಗರ ಪೊಲೀಸ್ ಆಯುಕ್ತ ಆರ್.ಚೇತನ್ ಅವರ ನಿರ್ದೇಶನದಂತೆ ಸಿಸಿಬಿ ಘಟಕದ ಪಿಐ ದಿಲೀಪ್ ಸಾಗರ್ ಅವರ ನೇತೃತ್ವದಲ್ಲಿ ಪಿಎಸ್‍ಐ ಶಿವಪ್ಪ, ಸಿಬ್ಬಂದಿಗಳಾದ ರವೀಂದ್ರಕುಮಾರ, ಸುನೀಲಕುಮಾರ, ಅಶೋಕ, ವಿಶ್ವನಾಥ, ಯಲ್ಲಪ್ಪ, ಅಶೋಕ ಕಟಕೆ, ಶ್ರೀಶೈಲ ಮತ್ತು ನಾಗರಾಜ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಮಿಲ್ಲತ್ ನಗರದ ಮಹ್ಮದ್ ಅಬ್ಬಾಸ್ ತಂದೆ ಮಹೆಮೂದ್ ಮುಸ್ತಫಾ ಖುರೇಶಿ (22), ಅಹ್ಮದ್ ನಗರದ ಮಹ್ಮದ್ ಜಾವೇದ್ ತಂದೆ ಮಹ್ಮದ್ ಇಮಾಮುದ್ದೀನ್ (19), ನಯಾ ಮಹೋಲ್ಲಾದ ಖಾಜಾ ಮೈನುದ್ದೀಮ್ ಇನಾಮದಾರ ಅಲಿಯಾಸ್ ತನ್ವೀರ್ ತಂದೆ ಅಬ್ದುಲ್ ಗಫಾರ್ ಇನಾಮದಾರ (23), ಮೋಮಿನಪುರದ ಮಹಿಬೂಬ್ ಪಾಶಾ ತಂದೆ ಅಬ್ದುಲ್ ಗನಿ ಲಂಗಡೆ (39) ಎಂಬುವವರನ್ನು ಬಂಧಿಸಿ 42 ಸಾವಿರ ರೂ.ಮೌಲ್ಯದ 14 ಮೊಬೈಲ್, 25 ಸಾವಿರ ರೂ.ಮೌಲ್ಯದ ಬೈಕ್ ಜಪ್ತಿ ಮಾಡಿದ್ದಾರೆ.