ಸೇವಾ ನಿವೃತ್ತ ಕನ್ನಡ ಪ್ರಾಧ್ಯಾಪಕರಿಗೆ ಸನ್ಮಾನ
ಕಲಬುರಗಿ:ಜು.18:ಡಾ. ಸೂರ್ಯಕಾಂತ ಸುಜ್ಯಾತ್ ಹಾಗೂ ಪೆÇ್ರ. ವೆಂಕಣ್ಣ ಡೊಣ್ಣೆಗೌಡ ಅವರ ಸೇವಾ ನಿವೃತ್ತಿ ನಿಮಿತ್ತವಾಗಿ ಹಮ್ಮಿಕೊಂಡ ಸನ್ಮಾನ ಹಾಗೂ ವಿಶೇಷ ಉಪನ್ಯಾಸಕಾರ್ಯಕ್ರಮ ಉದ್ಘಾಟಿಸಿ ಸಿದ್ಧಾರಾಮ ಹೊನ್ಕಲ್ ಅವರು ಉದ್ಘಾಟನಾಪರ ಮಾತನಾಡುತ್ತಾ, ಈ ಕನ್ನಡ ಸಾಹಿತ್ಯ ಹುಲುಸಾಗಿ ಬೆಳೆಯಲು ಅನುಕೂಲಕರ ವಾತಾವರಣವಿದೆ. ಈ ದಿಸೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯು ಕ್ರಿಯಾಶೀಲವಾಗಿ ಕಾರ್ಯನ್ಮೂಖವಾಗಿದೆ. ನಿವೃತ್ತಗೊಂಡ ಶಿಕ್ಷಕರಿಗೆ ಸನ್ಮಾನ ಮಾಡುತ್ತಿರುವುದು ಇದೊಂದು ಸತ್‍ಪರಂಪರೆಯಾಗಿದೆ. ಸ್ನೇಹಿತರಾದ ಸೂರ್ಯಕಾಂತ ಸುಜ್ಯಾತ್ ಅವರು ಸೃಜನಶೀಲ ಮತ್ತು ಅನುವಾದ ಸಾಹಿತ್ಯದಲ್ಲಿ ತನ್ನದೆಯಾದ ಛಾಪನ್ನು ಮೂಡಿಸಿದ್ದಾರೆ. ಸದಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕನ್ನಡ ಸಾರಸ್ವತಲೋಕಕ್ಕೆ ಸುಮಾರು ಹದಿನೇಳು ಕೃತಿಗಳನ್ನು ಅರ್ಪಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಕಲ್ಯಾಣ ಕರ್ನಾಟಕದ ಲೇಖಕರ, ಅನುವಾದಕರ ಕೊಡುಗೆ ಅನನ್ಯವಾಗಿದೆ. ಕನ್ನಡ ಸಾಹಿತ್ಯದ ಆದ್ಯ ಕೃತಿಯಾದ ಶ್ರೀವಿಜಯ ವಿರಚಿತ ಕವಿರಾಜಮಾರ್ಗ ಕೃತಿ ಹಾಗೂ ಹನ್ನೆರಡನೆ ಶತಮಾನದ ವಚನಾಂದೋಲನ ಕ್ರಾಂತಿ ಕನ್ನಡೀ ಜಗತ್ತಿಗೆ ಮಾದರಿಯಾಗಿತ್ತು ಎಂಬುದು ನಮ್ಮೆಲ್ಲರ ಹೆಮ್ಮೆ ಎಂದರು. ಈ ನಿಟ್ಟಿನಲ್ಲಿ ಯುವಕರು ಕೂಡ ಸಾಹಿತ್ಯಾಸಕ್ತಿ ಬೆಳೆಸಿಕೊಂಡು ಕನ್ನಡ ಸಾಹಿತ್ಯ ಉಳಿಸಿ, ಬೆಳೆಸುವಂತವರಾಗ ಬೇಕೆಂದರು.
ಡಾ. ಸೂರ್ಯಕಾಂತ ಸುಜ್ಯಾತ್ ಅವರ ಅನುವಾದ ಸಾಹಿತ್ಯ ಕುರಿತು ಡಾ. ದಸ್ತಗೀರ್‍ಸಾಬ್ ದಿನ್ನಿ ಅವರು ಮಾತನಾಡುತ್ತಾ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವಾಗ ಎರಡು ಭಾಷೆಗಳಲ್ಲಿ ನಡೆಯುವ ಸಂವಹನ ಕ್ರಿಯೆಯನ್ನು. ಅನುವಾದವೆಂಬುದು ಒಂದು ಭಾಷೆಯ ಭಾವವನ್ನು ಇನ್ನೊಂದು ಭಾಷೆಯಲ್ಲಿ ಮಿಡಿಯುವಂತೆ ಮಾಡವಂತದ್ದು. ಇದು ಅತ್ಯಂತ ಸೂಕ್ಷತೆ ಮತ್ತು ಅನುಭವದ ಪ್ರಜ್ಞೆಯಿಂದ ಕರಗತಮಾಡಿಕೊಂಡವರಿಂದ ಮಾತ್ರ ಸಾಧ್ಯ. ಸುಜ್ಯಾತ್ ಅವರು ಬಹುಭಾಷೆಗಳಲ್ಲಿ ಪರಿಣತಿಯನ್ನು ಪಡೆದಂತವರು ಹೀಗಾಗಿ ಕನ್ನಡ ಸಾಹಿತ್ಯಕ್ಕೆ ಹಲವಾರು ಕೃತಿಗಳನ್ನು ಅರ್ಪಿಸಿದ್ದಾರೆ. ಅವರ ಗುಲಾಮಗಿರಿ ಮರಾಠಿ, ದೀಕ್ಷೆ ಹಿಂದಿಯಲ್ಲಿ, ಜನಮನ್ನಣೆ ಪಡೆದ ಕೃತಿಗಳಾಗಿವೆ. ಬಡತನ ಶೋಷಣೆ, ಅವಮಾನ, ವೈಚಾರಿಕತೆ ಮಾನವೀಯ ಮೌಲ್ಯಗಳನ್ನು ಒಳಗೊಂಡ ಕೃತಿಗಳನ್ನು ರಚಿಸಿದ್ದಾರೆ. ಸಂಖ್ಯೆಗಿಂತ ಮೌಲ್ಯ, ಗಟ್ಟಿಯಾದ ಬರಹ ಮುಖ್ಯವೆಂದು ಕೊಂಡು ವಸ್ತುನಿಷ್ಟವಾಗಿ ಕಟ್ಟಿಕೊಟ್ಟಿದ್ದಾರೆ.
ಜ್ಯೋತಿಬಾ ಫುಲೆಯವರ ಜೀವನ ಸಾಧನೆ ಆಧಾರಿತ ಮೌಲಿಕ ಕೃತಿ ‘ತೃತೀಯ ರತ್ನ’ ಕೃತಿ ಕೆಳವರ್ಗ ದುಡಿಯುವ ವರ್ಗದವರ ನೋವಿನ ಕೂಗನ್ನು, ಸಂಕಟ, ಯಾತನೆಯನ್ನು ಅರ್ಥಪೂರ್ಣವಾಗಿ ನಿರೂಪಿಸಿ ದ್ದಾರೆ. ಸಮಸಮಾಜ ನಿರ್ಮಾಣಕ್ಕಾಗಿ ಹೋರಾಡಿದ ದೂರದೃಷ್ಟಿ ವ್ಯಕ್ತಿತ್ವದ ದರ್ಶನಮಾಡಿದ್ದಾರೆ. ಬಿ.ಶ್ಯಾಮ ಸುಂದರ್ ಅವರ ಹೋರಾಟದ ಹೆಜ್ಜೆಗಳು, ಮಾನವೀಯ ಮೌಲ್ಯ, ಜೀವಪರ ಚಿಂತನೆ ಹೊಂದಿದ ಕ್ರಾಂತಿಕಾರಿ ಚಲವಳಿಗಾರರ ಮನೋಭಾವ, ಸಮಾಜ ಸುಧಾರಣೆ ಬಗೆಯನ್ನು ಈ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ. ಮಹಾರಾಷ್ಟ್ರದ ಮಹಾನ್ ಸಂತ ಗಾಡಗೆ ಮಹಾರಾಜ್ ಅವರು ವಿಚಾರಧಾರೆಗಳು ತತ್ವಸಿದ್ಧಾಂತಗಳು, ಬದ್ಧತೆಗಳನ್ನು ನಿರೂಪಿಸಿದ್ದಾರೆ. ನುಡಿದಂತೆ ನಡೆದ ಸರಳ ಸಜ್ಜನ ವ್ಯಕ್ತಿ, ಸ್ವಚ್ಛತೆ ಮೊದಲ ಆಧ್ಯತೆ ನೀಡಿ ಸ್ವತಃ ತಾವೆ ಕಸಭಾರಿಗೆಯನ್ನು ಹಿಡಿದು ಸ್ವಚ್ಛಮಾಡಿದ ಸಂತ ಗಾಡಗೆ ಮಹಾರಾಜ್ ಎಂಬ ಮರಾಠಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಸೂರ್ಯಕಾಂತ ಸುಜ್ಯಾತ್ ಅವರ ಸೃಜನಶೀಲ ಸಾಹಿತ್ಯ-ಸಂಪಾದನೆ ಸಾಹಿತ್ಯ ಕುರಿತು ಪೆÇ್ರ. ವೆಂಕಣ್ಣ ಡೊಣ್ಣೇಗೌಡರು ಮಾತನಾಡುತ್ತಾ, ಕವನ, ಪ್ರಬಂಧಗಳನ್ನು ಬರೆದು. ಅವ್ಯವಸ್ಥೆಯ ಕುರಿತು ಬಂಡಾಯದ ಧ್ವನಿಯೆತ್ತಿದ್ದಾರೆ ಎಂದರು ಸುಜ್ಯಾತ್ ಅವರ ಸಾಹಿತ್ಯದಲ್ಲಿ ಹೈದ್ರಾಬಾದ್ ಕರ್ನಾಟಕದ ಸೊಗಡಿದೆ, ಸೊಬಗಿದೆ, ಅವರ ಕೃತಿಗಳು ಮೌಲ್ಯಗಳಿವೆ, ವೈಚಾರಿಕತೆಯಿಂದ ಕೂಡಿವೆ. ಡಾ. ಸೂರ್ಯಕಾಂತ, ಕಷ್ಟ, ಅವಮಾನ, ನೋವುಗಳು ಪ್ರತಿಯೊಬ್ಬರ ಬದುಕಿನಲ್ಲಿ ಬರುತ್ತವೆ. ಆದರೆ, ಅವುಗಳನ್ನು ದೈರ್ಯದಿಂದ ಆತ್ಮಸ್ಥೈರ್ಯದಿಂದ ಎದುರಿಸುವ ಸ್ವಭಾವ ನನ್ನದು ಎಂದುರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪೆÇ್ರ. ಎಚ್.ಟಿ. ಪೆÇೀತೆ ಅವರು ಮಾತನಾಡುತ್ತ ಕಲ್ಯಾಣ ಕರ್ನಾಟಕದ ಬರಹಗಾರರು ರಾಜ್ಯ, ರಾಷ್ಟ್ರ ಮಟ್ಟದ ಬರಹಗಾರರೆ ಆಗಿದ್ದಾರೆ. ಆದರೆ, ಈ ಭಾಗದವವರು ಅವಕಾಶಗಳಿಂದ ವಂಚಿತ ರಾಗುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ಸುಜ್ಯಾತ್ ಅವರ ಸ್ವಭಾವತಹ ನಿಷ್ಟುರ, ಯಾವುದೇ ರೀತಿಯ ಆಸೆ, ಮೋಹಕ್ಕೆ ಒಳಗಾದವರಲ್ಲ. ಅಪ್ಪಟ ಬುದ್ಧನ ಅನುಯಾಯಿಗಳು, ಎಷ್ಟೇಲ್ಲಾ ಕಷ್ಟ-ಅವಮಾನಗಳನ್ನು ಅನುಭವಿಸಿದರು. ಅದರ ಒಂದಿನಿತನ್ನು ಬೇರೆಯವರಿಗೆ ತೊರದೆ, ನಿರಾಸೆಗೊಳ್ಳದೆ ಸಾಹಿತ್ಯಕವಾಗಿ ತೊಡಗಿಸಿ ಕೊಂಡು ಬದುಕಿದ ಪ್ರತಿಭಾವಂತ ಬರಹಗಾರ, ಬಹÅ ಕಷ್ಟ-ನೋವುಗಳನ್ನು ನುಂಗಿಕೊಂಡು ಬಾಳಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು, ಇಂದಿನ ಯುವಕರು ಇಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಪ್ರಸ್ತುತ ದಿನಗಳಲ್ಲಿ ಯುವಕರು ಎಚ್ಚೆತ್ತು, ಜಾಗೃತರಾಗಬೇಕು, ಅವ್ಯವಸ್ಥೆ ವಿರುದ್ಧ ಧ್ವನಿಯೆತ್ತು ವಂತವರಾಗಬೇಕು ಎಂದು ಆಶಯ ವ್ಯಕ್ತಪಿಡಿಸಿದರು. ಕಾರ್ಯಕ್ರಮದಲ್ಲಿ ಡಾ. ಶ್ರೀಶೈಲ ನಾಗರಾಳ ಉಪಸ್ಥಿತರಿದ್ದರು. ಡಾ. ಸುನೀಲ ಜಾಬಾದಿ ನಿರೂಪಿಸಿದರು. ಡಾ. ಪ್ರೇಮ ಅಪಚಂದ ಸ್ವಾಗತಿಸಿದರು, ಡಾ. ಕೃಷ್ಣ ಕಾಕಲವಾರ ವಂದಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಥೆ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.