ಸಸಿ ನೆಡುವ ಕಾರ್ಯಕ್ರಮ
ಕಲಬುರಗಿ:ಜು.18:“ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಶರಣಬಸವೇಶ್ವರ ವಸತಿ ಪಬ್ಲಿಕ ಶಾಲೆಯ ಮೌಂಟೆಸರಿ ವಿಭಾಗದ ಮಕ್ಕಳಿಂದ ಸಸಿ ನಡೆಯವ ಕಾರ್ಯಕ್ರಮವನ್ನು ಏಪಾರ್ಡಿಸಲಾಯಿತ್ತು. ಮಾನ್ಯ ಪ್ರಧಾನ ಮಂತ್ರಿಗಳ ಸಂದೇಶದೊಂದಿಗೆ ಪ್ರತಿ ಮಗು ತನ್ನ ತಾಯಿಯ ಹೆಸರಲ್ಲಿ ಒಂದು ಗಿಡವನ್ನು ನೆಡಬೇಕು.
ಈ ಸಂದೇಶವು ಚಿಕ್ಕಮಕ್ಕಳಿಂದ ಕಾಡು ಬೆಳಸಿ ನಾಡು ಉಳಸಿ ಎಂಬದೇಯ ವಾಕ್ಯಯೊಂದಿಗೆ ಕಾರ್ಯಕ್ರಮ ಜರುಗಿತು. ಭಾರತ ದೇಶ ಹಚ್ಚುಹಸಿರಿನಿಂದ ಸಮೃದ್ಧಿಯಾಗಿ ಬೆಳೆಯಲು ಯುವ ಜನಾಂಗದ ಕೈಯಲ್ಲಿದೆ. ಆದ್ದರಿಂದ ಎಲ್ಲಾ ಮಕ್ಕಳು ಒಂದು ಗಿಡವನ್ನು ನೆಡಬೇಕು ಅದರಿಂದ ಮಳೆ ಬೆಳೆ, ಬಿಸಿಲಿನ ತಾಪನ ಇಳಿಕೆ. ಹೀಗೆ ಅನೇಕ ಪ್ರಕೃತಿ ವಿಕೋಪಗಳು ಹೋಗಲಾಡಿಸಲು ಗಿಡಗಳು ಅತಿ ಅವಶ್ಯಕತೆ. ಈ ಕಾರ್ಯಕ್ರಮವನ್ನು ಪ್ರಾಚಾರ್ಯರ ಮಾರ್ಗದರ್ಶದಲ್ಲಿ ಎಲ್ಲಾ ಮಕ್ಕಳೊಂದಿಗೆ ಹಾಗೂ ಶಿಕ್ಷಕವೃಂದದವರು ಭಾಗಿಯಾಗಿದರು.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಹಾಗೂ ಪೂಜ್ಯ ಮಾತೋಶ್ರೀ ದಾಕ್ಷಾಯಣಿ ಅವ್ವಾಜಿ ಹಾಗೂ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು, ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ. ಬಸವರಾಜ ದೇಶಮುಖ ಹಾಗೂ ಪ್ರಾಚಾರ್ಯರಾದ ಶ್ರೀ. ಎನ್.ಎಸ್. ದೇವರಕಲ್ ಅವರು ಈ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾ ಹಾರೈಸಿದರು.