ಸಂಭ್ರಮದ ಮೊಹರಮ್ ಆಚರಣೆ
ಕೊಲ್ಹಾರ:ಜು.18:ತ್ಯಾಗ ಬಲಿದಾನದ ಪ್ರತೀಕವಾಗಿರುವ ಮೊಹರಮ್ ಹಬ್ಬವನ್ನು ಪಟ್ಟಣದ ಹಿಂದೂ, ಮುಸ್ಲಿಂ ಬಾಂಧವರು ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದರು.
ಮೊಹರಂ ಹಬ್ಬದ ಕೊನೆಯ ದಿನವಾದ ಬುಧವಾರದಂದು ಸಾವಿರಾರು ಜನರು ಅಲಾಯಿ ದೇವರುಗಳ ದರ್ಶನ ಪಡೆದರು. ಸಾಯಂಕಾಲ ಪಟ್ಟಣದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಅಲಾಯಿ ದೇವರುಗಳ ಹಾಗೂ ಡೋಲಿಗಳ ಪರಸ್ಪರ ಭೇಟಿ ಜರುಗಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಹಾಗೂ ಹಿಂದೂ ಮುಸ್ಲಿಂ ಸಮಾಜದ ಅನೇಕ ಮುಖಂಡರು ಇದ್ದರು.