ಸಿದ್ದಾಂತ ಶಿಖಾಮಣಿ ಅಭಿಯಾನ
ಬೀದರ:ಜು.18:ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶಿವಧರ್ಮ ಸಂಚಾರ ಶ್ರೀ ಸಿದ್ದಾಂತ ಶಿಖಾಮಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೇಮಳಖೇಡ ಹಿರೇಮಠದ ಪೂಜ್ಯ ಶ್ರೀ ಷ.ಬ್ರ. ಡಾ|| ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿರುವರು. ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿ 2024 ಬರುವ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಪರ್ಯಂತರ, ನಿತ್ಯ ಒಂದೊಂದು ಗ್ರಾಮದಲ್ಲಿ ಶ್ರೀ ಸಿದ್ದಾಂತ ಶಿಖಾಮಣಿಯ ಅಭಿಯಾನದ ಹಿನ್ನೆಲೆಯಲ್ಲಿ ಶಿವ ದರ್ಶನ ಧರ್ಮ ಸಂಚಾರವನ್ನು ಕೈಗೊಳ್ಳುವ ನಿರ್ಧಾರವನ್ನು ಮಾಡಲಾಗಿದೆ. ಜಿಲ್ಲೆಯ ಬೀದರ, ಚಿಟಗುಪ್ಪ, ಹುಮನಾಬಾದ, ಬಸವಕಲ್ಯಾಣ, ಹುಲಸೂರ, ಭಾಲ್ಕಿ, ಕಮಲನಗರ ಮತ್ತು ಔರಾದ (ಬಾ) ಎಲ್ಲ ಎಂಟು ತಾಲೂಕಿನಲ್ಲಿ ಈ ಶಿವಧರ್ಮ ಸಂಚಾರದ ಶ್ರೀ ಸಿದ್ದಾಂತ ಶಿಖಾಮಣಿ ಅಭಿಯಾನ ನಡೆಯಲಿದೆ. ಪ್ರತಿಯೊಂದು ತಾಲೂಕಿನಲ್ಲಿಯು ಪ್ರಮುಖ ಗ್ರಾಮಗಳಲ್ಲಿ ಈ ಅಭಿಯಾನವು ನಡೆಯುವುದು.
ನಿಯೋಜಿತ ಪ್ರತಿಯೊಂದು ಗ್ರಾಮಗಳಲ್ಲಿ ಶ್ರೀ ಸಿದ್ದಾಂತ ಶಿಖಾಮಣಿ ಅಭಿಯಾನದ ಸ್ವಾಗತ ಸಾಯಂಕಾಲ ಶ್ರೀ ಸಿದ್ದಾಂತ ಶಿಖಾಮಣಿಯ ಪಾರಾಯಣ, ಶಿವದರ್ಶನ ಪ್ರವಚನ, ಸಾಮೂಹಿಕ ಬಿಲ್ವಾರ್ಚನ ಇಷ್ಟಲಿಂಗ ಪೂಜೆ, ಲಿಂಗದೀಕ್ಷಾ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆಯ್ದ ಕೆಲವು ಗ್ರಾಮಗಳಲ್ಲಿ ವಿಶ್ವಶಾಂತಿ ಮತ್ತು ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಕರ್ನಾಟಕ ಗಡಿಭಾಗದ ನೆರೆಯ ತೆಲಂಗಾಣ ಮತ್ತು ಮಹಾರಾಷ್ಟ್ರದ ಕೆಲವು ಗ್ರಾಮಗಳಲ್ಲಿಯೂ ಸಹ ಈ ಶಿವಧರ್ಮ ಸಂಚಾರ ಶ್ರೀಸಿದ್ದಾಂತ ಶಿಖಾಮಣಿ ಅಭಿಯಾನ ನಡೆಸುವ ನಿರ್ಧಾರ ಸಹ ಕೈಗೊಳ್ಳಲಾಗಿದೆ. ಈ ಐತಿಹಾಸಿಕ ಶಿವಧರ್ಮ ಅಭಿಯಾನದ ಯಶಸ್ವಿಗಾಗಿ ಸೇವಾ ಸಮಿತಿಗಳನ್ನು ರಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ 15 ರಿಂದ 20 ಗ್ರಾಮಗಳು ಇದಕ್ಕಾಗಿ ಮುಂದೆ ಬಂದಿವೆ. ಇನ್ನೂ ಒಂದು ವಾರದೊಳಗೆ ಇನ್ನೂಳಿದ ಗ್ರಾಮಗಳು ಇದರಲ್ಲಿ ಸೇರ್ಪಡೆಗೊಳ್ಳುವ ವಿಶ್ವಾಸ ಇದೆ. ನಮ್ಮ ನಿರೀಕ್ಷೆದಕ್ಕಿಂತ ಹೆಚ್ಚಿನ ಸಹಯೋಗ ದೊರೆಯುತ್ತಿರುವುದು ಈ ಧಾರ್ಮಿಕ ಆಯೋಜನೆಗೆ ಮತ್ತೋಷ್ಟು ಶಕ್ತಿ ತುಂಬಿ ಬರುತ್ತಿದೆ. ಎಲ್ಲಾ ಕಡೆಯಿಂದಲು ಭಕ್ತರು ನೀರಿಕ್ಷೇಗೆ ಮೀರಿ ಸೇವೆ ಸಲ್ಲಿಸಲು ಮುಂದೆ ಬರುತ್ತಿದ್ದಾರೆಂದು ಮತ್ತು ಮುಂದಿನ ವಾರದಲ್ಲಿ ಈ ಶಿವಧರ್ಮ ಸಂಚಾರದ ಉದ್ಘಾಟನೆ ಸ್ಥಳ ಮತ್ತು ಸಮಾರೋಪದ ಸ್ಥಳವನ್ನು ಘೋಷಿಸಲಾಗುವುದು ಪೂಜ್ಯ ಶ್ರೀ ಡಾ|| ರಾಜಶೇಖರ ಶಿವಾಚಾರ್ಯರು ತಿಳಿಸಿದರು.