ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿಗೆ ಭಾಜನರಾದ ಅನೀಲಕುಮಾರ ಸಿಂಧೆ
ಚಿಟಗುಪ್ಪ:ಜು.18:ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಆಶ್ರದಲ್ಲಿ ನಗರದ ಡಾ.ಚನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ ನಡೆದ ಶಿಕ್ಷಣ ನಮ್ಮ ಹಕ್ಕು ವಿಚಾರ ಸಂಕಿರಣ ಮತ್ತು ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದ ದಿವ್ಯ ಸಾನ್ನಿದ್ಯವಹಿಸಿ ನಾಡೋಜ ಡಾ.ಬಸವಲಿಂಗ ಪಟ್ಟದೇವರವರು ವಿಶ್ವ ಗುರು ಬಸವಣ್ಣನವರ ಕಾಯಕ ಭೂಮಿಯಾದ ಬೀದರಿನಲ್ಲಿ ರಾಜ್ಯ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿ ರಾಜ್ಯದ ಎಲ್ಲಾ ಜಿಲ್ಲೆಗಳ ಕಾಯಕ ಜೀಬಿಗಳನ್ನು ಗುರುತಿಸಿ ಗೌರವಿಸಿದ್ದು ಸ್ವಾಗತಾರ್ಹ ಕೆಲಸವೆಂದು ಮಾತನಾಡಿದರು. ಮುಖ್ಯ ಅತಿಧಿಗಳಾಗಿ ಆಗಮಿಸಿದ ಡಾ.ಅಂಜನಪ್ಪ ವಿದ್ಯಾರ್ಥಿಗಳಿಗೆ ಮಾನವಿಯ ಮೌಲ್ಯ ತುಂಬುವ ನೈತಿಕ ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಸನದ ಪಾಠ ಅವಶ್ಯಕವಿದೆ ಎಂದು ನುಡಿದರು. ಸದರಿ ಕಾರ್ಯಕ್ರಮದಲ್ಲಿ ಅನೀಲಕುಮಾರ ಸಿಂಧೆಯವರ ಸಮಾಜ ಮುಖಿ ಕಾರ್ಯಗಳು ಹಾಗೂ ಕನ್ನಡ ನಾಡು ನುಡಿಯ ಸೇವೆಯನ್ನು ಪರಿಗಣಿಸಿ, ಕರೋನಾ ಸಂದರ್ಭದಲ್ಲಿಯ ಜನ ಸೇವೆ, ಆಜಾದಿಕ ಅಮೃತ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಸಂಗ್ರಾಮದ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಹಿನ್ನಲೆಯಲ್ಲಿ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು ಸದರಿ ಕಾರ್ಯಕ್ರಮದಲ್ಲಿ ಶಾಸಕರಾದ ಶೈಲೆಂದ್ರ ಬೆಲ್ದಾಳೆ, ವಿಧಾನ ಪರಿಷತ್ತ ಸದಸ್ಯರಾದ ಚಂದ್ರಶೇಖರ ಪಾಟೀಲ, ಮಾರುತಿರಾವ ಮೂಳೆ, ಭೂದಾನಿ ಆರ್, ಬಸವರಾಜ ಧನ್ನೂರ, ಕ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಅಧ್ಯಕ್ಷತೆ ವಹಿಸಿದರು ಅದೇ ರೀತಿ ಬಾಬುರೋದನಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ್ ಚನ್ನಶೆಟ್ಟಿ, ಸಂತೋಷ್ ಪಾಟೀಲ್, ವಿಜಯಕುಮಾರ್, ಶರಣಬಸವ, ರವೀಂದ್ರ ಶಾಬಾದಿ,ಡಾ. ಶಿವರಂಜನ್ ಸತ್ಯಂಪೇಟೆ, ಶರಣಬಸಪ್ಪ ನಾಗೂರ್, ಸತೀಶ್ ಸಜ್ಜನ್, ನೀಲಕಂಠ ಅವಡಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ದೇವೇಂದ್ರಪ್ಪ ಕಲಾಲ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು