ಬೀದರ್ ಜಿಲ್ಲೆಯಲ್ಲಿ ವನ್ಯಜೀವಿಗಳ ಹಾವಳಿ ನಿಯಂತ್ರಿಸಿ
ಭಾಲ್ಕಿ,:ಜು.18:ಬೀದರ್ ಜಿಲ್ಲೆಯಲ್ಲಿ ವನ್ಯಜೀವಿಗಳ ಹಾವಳಿಯಿಂದ ರೈತರು ತೀವ ಸಂಕಷ್ಟು ಎದುರಿಸುತ್ತಿದ್ದಾರೆ. ಹೀಗಾಗಿ ವನ್ಯಜೀವಿಗಳ ನಿಯಂತ್ರಿಸಲೂ ಸೂಕ್ತ ಕಾರ್ಯಪಡೆ ರಚಿಸಬೇಕು ಎಂದು ಜಿಲ್ಲೆಯ ವಿವಿಧ ಮಠಾಧೀಶರು ಒತ್ತಾಯಿಸಿದ್ದಾರೆ.
ಈ ಕುರಿತು ಬೆಂಗಳೂರಿನ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ನಿವಾಸದಲ್ಲಿ ಬುಧವಾರ ಮೇಹಕರ್‍ನ ರಾಜೇಶ್ವರ ಶಿವಾಚಾರ್ಯ ನೇತೃತ್ವದಲ್ಲಿ ಹಿರೇನಾಗಾಂವ, ಹುಡಗಿ, ಹಳ್ಳಿಖೇಡ ಶ್ರೀಗಳು ಸಚಿವ ಖಂಡ್ರೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ವಿಶೇಷವಾಗಿ ಜಿಲ್ಲೆಯಲ್ಲಿ ಜಿಂಕೆಗಳ ಹಾವಳಿ ಜಾಸ್ತಿಯಾಗಿ ರೈತರಿಗೆ ತೀವ್ರ ಸಂಕಷ್ಟವಾಗುತ್ತಿದ್ದು ಅರಣ್ಯ ಸಚಿವರಾಗುವ ನೀವು ಜಿಲ್ಲೆಯಲ್ಲಿ ವನ್ಯಜೀವಿಗಳ ಹಾವಳಿ ತಡೆಯಲು ವಿಶೇಷ ಕಾರ್ಯಪಡೆ ರಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು ಇದಕ್ಕೆ ಸ್ಪಂದಿಸಿದ ಸಚಿವರ ಈಶ್ವರ ಖಂಡ್ರೆ ಅವರು ಅರಣ್ಯ ಸಂಪತ್ತು ಕಡಿಮೆಯಾಗಿ ವನ್ಯಜೀವಿಗಳು ನಾಡಿಗೆ ಬರುತ್ತಿವೆ ಬೀದರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಲು ಈಗಾಗಲೇ ಸಾಕಷ್ಟು ಕ್ರಮಗಳು ಕೈಗೊಂಡಿದ್ದೇವೆ ಕಳೆದ ವರ್ಷ 15 ಲಕ್ಷ ಸಸಿ ನೆಡಲಾಗಿದ್ದು ಈ ವರ್ಷ ಸುಮಾರು 20 ಲಕ್ಷ ಸಸಿಗಳು ಬೀದರ ಜಿಲ್ಲೆಯಲ್ಲಿ ನೆಡಲು ಗುರಿ ಹೊಂದಿದ್ದೇವೆ ವನ್ಯಜೀವಿಗಳನ್ನು ಕಾಡಿಗೆ ನಿiÀುಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.