ಮಾದಯ್ಯಾ ಅಭಿವೃದ್ದಿ ನಿಗಮ ನಾಮಕರಣ ಮಾಡಿ: ಮಹೇಶ ಹೂಗಾರ ಆಗ್ರಹ
ಇಂಡಿ,ಜು.18: ಹಿಂದಿನ ಸರಕಾರ ಹೂಗಾರ ನಿಗಮ ಸ್ಥಾಪಿಸಿದೆ ಈಗ ಅದಕ್ಕೆ ಅನುಧಾನ ಮೀಸಲಿಡುವುದರ ಜೊತೆ ನಿಗಮದ ಅಧ್ಯಕ್ಷರನ್ನಾಗಿ ಕೂಡಲೆ ನೇಮಕ ಮಾಡಬೇಕು ಎಂದು ಗ್ರೇಡ್ -2 ತಹಶೀಲ್ದಾರ ಧನಪಾಲ ದೇವೂರ ಇವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಹೂಗಾರ,ಮಾಲಿ ಮಾಲಗಾರ ಸಮುದಾಯ ಅತ್ಯೆಂತ ಕಡು ಬಡತನದಲ್ಲಿದ್ದು ಕೆಲ ಕುಟುಂಬಗಳ ಪರಸ್ಥಿತಿ ಹೇಳತೀರದು ಹೂ ಮಾಲೆ ಹಾಕಿ ಜೀವನ ಸಾಗಿಸುವ ಪರಸ್ಥಿತಿ ಇದೆ ಸರಕಾರ ಹೆಚ್ಚುವರಿ ಅನುಧಾನ ನೀಡಿ ಹೂಗಾರ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಬೇಕು. ಕೇವಲ ನಿಗಮ ತೆರೆದರೆ ಸಾಲದು ಅದಕ್ಕೆ ಅನುಧಾನ ನೀಡಿ ಮಾಲಿ, ಮಾಲಗಾರ,ಹೂಗಾರ ಅಭಿವೃದ್ದಿ ನಿಗಮ ಕೇಂದ್ರ ಕಚೇರಿ ಸ್ಥಾಪಿಸಿ ನಿಗಮಕ್ಕೆ ಹೂಗಾರ ಮಾದಯ್ಯ ಅಭಿವೃದ್ದಿ ನಿಗಮ ಎಂದು ನಾಮಕರಣ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸೋಮಶೇಖರ ಹೂಗಾರ, ಮಹೇಶ ಹೂಗಾರ, ಸಿದ್ದಲಿಂಗ ಪೂಜಾರಿ, ಶಂಕರ ಹೂಗಾರ, ಶ್ರೀಶೈಲ ಹೂಗಾರ, ಧರೇಪ್ಪ ಹೂಗಾರ, ಅಮೀತ ಹೂಗಾರ, ಶಿವಯೋಗೇಪ್ಪ ಹೂಗಾರ, ಸಂತೋಷ ಹೂಗಾರ, ಪ್ರಶಾಂತ ಹೂಗಾರ, ರವಿ ಹೂಗಾರ, ವಿರೇಶ ಹೂಗಾರ, ಶಾಂತಪ್ಪ ಪೂಜಾರಿ, ಗುರಪ್ಪ ಹೂಗಾರ, ಮಹಾಂತೇಶ ಹೂಗಾರ, ಕಲ್ಲಪ್ಪ ಹೂಗಾರ, ಮಹಾದೇವ ಹೂಗಾರ ಸೇರಿದಂತೆ ಅನೇಕರು ಇದ್ದರು.