ಪಶುಸಂಗೋಪನಾ ಘಟಕ ಅಧಿಕಾರೇತರ ಸದಸ್ಯರ ನೇಮಕ ಮಾಡಿಲ್ಲ ಯಾಕೆ ?: ಯಶವಂತರಾಯಗೌಡ ಪಾಟೀಲ
ಇಂಡಿ ,ಜು.18: ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 86 ಶಾಸಕ ಯಶವಂತರಾಯಗೌಡ ಪಾಟೀಲ ವಿಧಾನಸಭೆಯ ಅಧಿವೇಶನದಲ್ಲಿ ರಾಜ್ಯದ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆವತಿಯಿಂದ 2023- 24ನೇಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ಉಳಿಕೆ ಅನುಧಾನದಲ್ಲಿ ರಾಜ್ಯ ಪರಿಷತ್ ಸಭೆಯ ನಡಾವಳಿಯಂತೆ ಎಸ್.ಸಿ.ಪಿ ,ಟಿ.ಎಸ್.ಪಿ ಫಾಲಾನುಭವಿಗಳಿಗೆ ಒಂದು ಮಿಶ್ರತಳಿ ಹಸು ಘಟಕವನ್ನು ಅನುಷಾನಗೋಳಿಸುವ ಯೋಜನೆಗಳ ಫಲಾನುಭವಿಗಳ ಆಯ್ಕೆ ಸಮಿತಿ ಮತ್ತು ಮೇಲ್ವೀಚಾರಣೆ ಸಮಿತಿಯನ್ನು ರಚಿಸಲು ಒಂದು ವಿಧಾನಸಭಾ ಕ್ಷೇತ್ರಕ್ಕೆ ಎಷ್ಟು ಜನ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಪ್ರಶ್ನಿಸಿದರು ? ಇದಕ್ಕೆ ಪಶುಸಂಗೋಪನಾ ಹಾಗೂ ರೇಷ್ಮೇ ಸಚಿವರು ಉತ್ತರ ನೀಡಿ ಒಂದು ವಿಧಾನ ಸಭಾ ಕ್ಷೇತ್ರಕ್ಕೆ ಆಯ್ಕೆ ಸಮಿತಿ 04 ಜನ ಅಧೀಕಾರೇತರನ್ನು ಸದಸ್ಯರನ್ನಾಗಿ ನೇಮಕಮಾಡಲಾಗಿದೆ ಎಂದು ಸಚಿವರು ಉತ್ತರಿಸಿದರು.
ರಾಜ್ಯದ ವಿವಿಧ ಮತಕ್ಷೇಗಳಲ್ಲಿ ಸದರಿ ಆಯ್ಕೆ ಸಮಿತಿಗೆ ಈಗಾಗಲೆ ಅಧಿಕಾರೇತರ ಸದಸ್ಯನಾಗಿ ನೇಮಕ ಮಾಡಿ ಆದೇಶಸಿರುವದು ನಿಜವೇ. ಹಾಗಿದ್ದಲ್ಲಿ ಎಷ್ಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಅಧಿಕಾರೇತರ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿದೆ ವಿವರ ನೀಡಿ ಎಂದು ಶಾಸಕ ಪಾಟೀಲ ಕೇಳಿದರು ನಂತರ ಸಚಿವರು ಮಾತನಾಡಿ ರಾಜ್ಯದ 25 ಮತಕ್ಷೇತ್ರಗಳಲ್ಲಿ ಸದರಿ ಆಯ್ಕೆ ಸಮೀತಿಗೆ ಈಗಾಗಲೆ ಅಧಿಕಾರೇತರ ಸದಸ್ಯರುಗಳನ್ನು ನೇಮಕ ಮಾಡಿ ಆದೇಶಿಸಲಾಗಿರುತ್ತದೆ.
ಬಾಕಿ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಆಯ್ಕೆ ಸಮಿತಿಗೆ ಅಧಿಕಾರೇತರರಸದಸ್ಯರನ್ನಾಗಿ ನಾಮನಿರ್ದೇಶನ ಮಾಡದಿರಲು ಕಾರಣಗಳೇನು ? ಯಾವಾಗ ಮತ್ತು ಯಾವ ಕಾಲಮಿತಿಯಲ್ಲಿ ಬಾಕಿ ಉಳಿದಿರುವ ವಿಧಾನ ಸಭಾ ಕ್ಷೇತ್ರಗಳಿಗೆ ರಾಜ್ಯ ಪರಿಷತ್ ಸಭೆಯ ನಡುವಳಿಕೆಯಂತೆ ಎಸ್.ಸಿ.ಎಸ್ಪಿ /ಟಿ.ಎಸ್.ಪಿ ಫಲಾನುಭವಿಗಳಿಗೆ ಒಂದು ಮಿಶ್ರತಳಿ ಹಸು ಘಟಕವನ್ನು ಅಟನುಷ್ಠಾನಗೊಳಿಸುವ ಯೋಫಜನೆಗಳ ಫಲಾನುಭವಿಗಳ ಆಯ್ಕೆ ಸಮಿತಿ ಮತ್ತು ಮೇಲ್ವೀಚಾರಣಾ ಸಮಿತಿಗೆ ಇಂಡಿ ಮತಕ್ಷೇತ್ರದ ಶಾಕರು ಶಿಫಾರಸ್ಸು ಮಾಡಿದ ಸದಸ್ಯರನ್ನು ಆಯ್ಕೆ ಮಾಡಿ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗುವುದು .
ಇದಕ್ಕೆ ಸಚಿವರು ಉತ್ತರಿಸಿ ಅಧಿಕಾರೇತರ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗುತ್ತದೆ ಎಂದರು.
ಮತ್ತೆ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ ಈ ಯೋಜನೆ ಮಂಜೂರಾದ ಅನುಧಾನ ಎಷ್ಟು?
ಸದರಿ ಯೋಜನೆಗೆ ರೂ 10.00 ಕೋಟಿ ಮಂಜುರಾಗಿದ್ದು ವಿಧಾನ ಸಭಾ ಕ್ಷೇತ್ರವಾರು ಅನುಭಂದ-02ರಲ್ಲಿ ಮಾಹಿತಿ ನೀಡಲಾಗಿದೆ ಎಂದು ಪಶುಸಂಗೋಪನಾ ಮತ್ತು ರೇಷ್ಮೇ ಸಚಿವರು ಶಾಸಕರ ಪ್ರಶ್ನೆಗೆ ಉತ್ತರಿಸಿದರು.