ಚರಂಡಿ ನೀರು ಮನೆಯ ಒಳಗೆ
ಬಸವಕಲ್ಯಾಣ:ಜು.18: ಹುಲಸೂರ: ಪಟ್ಟಣದ ವಾರ್ಡ ನಂಬರ 9 ರಲ್ಲಿ ಬರುವ ಹಿಮ್ಮತ ನಗರದಲ್ಲಿನ ನಿವಾಸಿ ಅನಿಲಕುಮಾರ ರಾಮಚಂದ್ರ ಮೋಚಿ ಅÀವರ ಮನೆಗೆ ಚಂರಡಿ ನೀರು ನುಗ್ಗುತ್ತಿದ್ದು ,ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದರು ಗಮನ ಹರಿಸುತ್ತಿಲ್ಲಾ ಎಂದು ಅವರು ಆರೋಪಿಸಿದಾರೆ.
ಕೆಲವು ದಿನಗಳ ಹಿಂದೆ ಸಂತ ರಘುನಾಥ್ ಮಾಹರಾಜ ಶಾಲೆಯ ತಡೆಗೊಡೆಯ ಎದುರುಗಡೆ ನಾಲಿ ಸ್ವಚ್ಛತೆ ಬಗ್ಗೆ ಸುದ್ದಿ ವಾಹಿನಿಗಳು ಸುದ್ದಿ ಬಿತ್ತರಿಸಿದ ಹಿನ್ನಲೆ, ಗ್ರಾಮ ಪಂಚಾಯತಿರವರು ಎಚ್ಚೆತ್ತುಕೊಂಡು ಜೆಸಿಬಿ ಮೂಲಕ ಚರಂಡಿ ನೀರು ಹಾದು ಹೊಗಲು ಚರಂಡಿ ಅಗೆದು ಅರ್ಧಕ್ಕೆ ನಿಲ್ಲಿಸಿದರ ಪರಿಣಾಮ ಈ ಸಮಸ್ಯೆ ಎದುರಾಗುತ್ತಿದೆ ಎಂದು ತಿಳಿಸಿದ್ದಾರೆ.
ವಾರ್ಡ ನಂಬರ 9ರಲ್ಲಿನ ನಿವಾಸಿ ಅನಿಲಕುಮಾರ ರಾಮಚಂದ್ರ ಮೋಚಿ ಅÀವರ ಮನೆಗೆ ಚರಂಡಿ ನೀರು ನುಗ್ಗುತ್ತಿದು ಇದರ ಬಗ್ಗೆ ಹಲವಾರು ಸಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕು ತಂದರು ಈ ಕಡೆ ಗಮನ ಹರಿಸುತ್ತಿಲ್ಲ ಚರಂಡಿ ನೀರಿನ ಜೋತೆ ಹಾವುಗಳು ಮನೆಗೆ ನುಗ್ಗುತ್ತಿದ್ದು, ನಮ್ಮ ಕುಟುಂಬಸ್ಥರು ಭಯದ ವಾತಾವರಣದಲ್ಲಿ ದಿನ ಕಳೆಯುವ ಪ್ರಸಂಗ ಉಂಟಾಗಿದೆ.
ಇದರಿಂದ ನಮ್ಮ ಜೀವಕ್ಕೆ ಪ್ರಾಣ ಹಾನಿ ಉಂಟಾದಲ್ಲಿ ಗ್ರಾಮ ಪಂಚಾಯತಿ ಅÀವರೇ ಕಾರಣರಾಗುತ್ತಾರೆ ಎಂದು ಅವರು ಆರೋಪ ಮಾಡಿದಾರೆ. ಈಗÀಲಾದರು ಗ್ರಾಪಂನವರು ಎಚ್ಚೆತ್ತುಕೊಂಡು ಗಮನ ಹರಿಸಿ ಆ ಕಟುಂಬಸ್ಥರ ಸಮಸ್ಯೆ ಬಗೆ ಹರಿಸುತ್ತಾರ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.