ಹದಗೆಟ್ಟ ಬಸವಕಲ್ಯಾಣ-ಹುಲಸೂರ ಮುಖ್ಯ ರಸ್ತೆ
ಬಸವಕಲ್ಯಾಣ:ಜು.18: ರಸ್ತೆಯ ಮೇಲೆ ಬಿದ್ದ ಗುಂಡಿಗಳು ಅದರಲ್ಲಿ ನಿಲ್ಲುವ ಮಳೆ ನೀರು, ರಸ್ತೆ ಯಾವುದು ಗುಂಡಿ ಯಾವುದು ಅಂತ ತಿಳಿಯದೇ ನಿತ್ಯ ಪರದಾಡುವ ಪ್ರಯಾಣಿಕರು ಬಿದ್ದ ಗುಂಡಿಗಳನ್ನು ಸರಿ ಪಡಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪ್ರಯಾಣಿಕರ ಒತ್ತಾಯ
ಹುಲಸೂರ ತಾಲೂಕಿನ ಬೇಲೂರ ಗ್ರಾಮದ ಹತ್ತಿರ ಇರುವ ಸೇತುವೆಯ ಎದುರುಗಡೆ ಕಳೆದ ಕೆಲ ದಿನಗಳಿಂದ ರಾಜ್ಯ ಹೆದ್ದಾರಿ ಹಾಳಾಗಿದ್ದು ಇದರಿಂದಾಗಿ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ನಿತ್ಯ ಈ ರಸ್ತೆಯಲ್ಲಿ ಓಡಾಡುವವರಿಗೆ ಗುಂಡಿ ಬಿದ್ದಿರುವ ಅರಿವಿದೆ ಆದರೆ ಹೊಸದಾಗಿ ಬರುವ ಪ್ರಯಾಣಿಕರು ತೊಂದರೆ ಅನುಭವಿಸುವ ಜೊತೆಗೆ ಅಪಘಾತಗಳು ಆಗುವ ಸಾಧ್ಯತೆಗಳಿದ್ದು ಕೂಡಲೇ ಸಂಬಂಧಿತ ಇಲಾಖೆಯ ಅಧಿಕಾರಿಗಳು ರಸ್ತೆ ದುರಸ್ಥಿ ಕಾರ್ಯ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಾರ್ವಜನಿಕರು ಒತ್ತಾಯಿಸಿತ್ತಿದ್ದಾರೆ.
ಅಲ್ಲದೆ ತಾಲೂಕಿನ ದೇವನಾಳ ಕ್ರಾಸ್ ಸಮೀಪ ಬಹಳ ದಿನಗಳಿಂದ ರಸ್ತೆ ಸಂಪೂರ್ಣ ಕಿತ್ತು ಹೊಗಿದ್ದರಿಂದ ಈಗಾಗಲೇ ಕೆಲ ದ್ವೀಚಕ್ರ ವಾಹನಗಳ ಸವಾರರು ಬಿದ್ದು ಸಣ್ಣ-ಪುಟ್ಟ ಗಾಯ ಮಾಡಿಕೊಂಡಿದ್ದಾರೆ ಎಂದು ಗಡಿಗೌಂಡಗಾಂವ ಗ್ರಾಮದ ಮಾಜಿ ಗ್ರಾಪಂ ಉಪಾಧ್ಯಕ್ಷ ದೀಪಕ ಪಾಟೀಲ ತಿಳಿಸಿದ್ದಾರೆ.
ಅದೇ ರೀತಿ ಹುಲಸೂರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿದು, ಮಳೆ ಬಂದರೆ ಸಾಕು ಗುಂಡಿಗಳು ಕೆರೆಗಳಾಗಿ ಮಾರ್ಪಡಾಗುತ್ತಿವೆ. ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಕಾಲುವೆ ಮಾಡಿದರು ಉಪಯೋಗಕ್ಕೆ ಬಾರದ ಹಾಗೆ ಆಗಿವೆ.
ಪಟ್ಟಣದ ಪ್ರವೇಶ ದ್ವಾರದಲ್ಲಿ ಮಳೆ ನೀರು ಹೋಗಲು ಯಾವುದೇ ದಾರಿ ಇರದ ಕಾರಣ ಪಟ್ಟಣದ ಒಳಗಡೆ ಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತು ಕೆರೆಯಂತೆ ಮಾರ್ಪಾಡುಗುತ್ತಿದೆ. ಆದರಿಂದ ಲೋಕೋಪಯೋಗಿ ಇಲಾಖೆ ಅÀವರು ಈ ಕಡೆ ಗಮನ ಹರಿಸಿ ಕುಡಲೇ ಮಖ್ಯ ರಸ್ತೆಯ ದುರಸ್ತಿ ಹಾಗು ಪಟ್ಟಣದ ಪ್ರವೇಶ ದ್ವಾರದಲ್ಲಿ ನೀರು ನೀಲ್ಲುತ್ತಿರುವುದು ತಪ್ಪಿಸಿ ಸರಾಗವಾಗಿ ನೀರು ಹರಿಯಲು ವ್ಯವಸ್ಥೆ ಕೈಗೊಳ್ಳಬೇಕು ಮತ್ತು ರಸ್ತೆ ದುರಸ್ಥಿ ಮಾಡಿಕೊಡಬೆಕೆಂದು ಸಮಾಜಿಕ ಕಾರ್ಯಕರ್ತರಾದ ಪ್ರವೀಣ ಕಾಡಾದಿ, ಸುನೀಲಕುಮಾರ ಕಾಡಾದಿ, ಗುಲಾಮ ಬಡಾಯಿ,ಲೊಕೇಶ ಧಬಾಲೆ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.