ಶ್ರೀಜೈವೀರ್ ಹನುಮಾನ್ ದೇವಸ್ಥಾನದಲ್ಲಿ ವ್ಯಾಸ ಸಾಹಿತ್ಯ ವಿಚಾರ ವಾಹಿನಿ ಸಂಕೀರ್ತನೆ
ಕಲಬುರಗಿ:ಜು.18:ವ್ಯಾಸ ಸಾಹಿತ್ಯ ವಿಚಾರ ವಾಹಿನಿಯಿಂದ ಕರುಣೇಶ್ವರ ನಗರದ ಶ್ರೀ ಹನುಮಾನ್ ಮಂದಿರದಲ್ಲಿ ಆಷಾಢ ಶುದ್ಧ ಏಕಾದಶಿ, ಬುಧವಾರ ದಿ.17-7-24 ರಂದು ಸಂಜೆ 5.30 ಕ್ಕೆ ವಿಚಾರ ಸಂಕೀರ್ತನೆಯ 7 ನೆಯ ಆವೃತ್ತಿಯನ್ನು ಹಮ್ಮಿಕೊಳ್ಳಲಾಗಿತ್ತು
ವ್ಯಾಸ ಸಾಹಿತ್ಯ ವಿಚಾರ ವಾಹಿನಿ ಅಧ್ಯಕ್ಷರಾದ ಪಂಡಿತ್ ಶ್ರೀ ಗೋಪಾಲಾಚಾರ್ಯ ಅಕಮಂಚಿ ಅವರು ಮಾತನಾಡಿ ಸದಾಚಾರ ಸ್ಮೃತಿ ಯಲ್ಲಿನ ದೈನಂದಿನ ಆಚರಣೆಗಳ, ನಿತ್ಯ ಕರ್ಮಾನುಷ್ಟಾನಗಳ ಕುರಿತು ಮಾತನಾಡಿದರು. ಪಾರಾಯಣ ಸಂಘದ ಸದಸ್ಯರ ಧಾರ್ಮಿಕ ಪ್ರಶ್ನೆಗಳಿಗೆ ಉತ್ತರಿಸಿದರು.
ಪಾರಾಯಣ ಸಂಘದ ಪ್ರಮುಖರಾದ ಜಗನ್ನಾಥಾಚಾರ್ಯ ಸಾಗರ್, ಪದ್ಮನಾಭಾಚಾರ್ಯ ಜೋಶಿ, ನರಸಿಂಗರಾವ್ ಕುಲಕರ್ಣಿ, ಅನಿಲ್ ಕುಲಕರ್ಣಿ, ವಿನುತ ಜೋಶಿ, ಪಿ ಬಿ ಜೋಶಿ ನಗನೂರು, ಗೋವಿಂದರಾವ್ ದೇಶಪಾಂಡೆ, ಲಕ್ಷ್ಮಣರಾವ್ ಕುಲಕರ್ಣಿ, ಸಂಜೀವ ಮಹಿಪತಿ, ಪ್ರವೀಣ ಓಂಕಾರ್, ಜಯತೀರ್ಥ ಶರ್ಮಾ, ಅರ್ಚಕರಾದ ಶ್ರೀಅಚ್ಯುಥ ಆಚಾರ್, ವಿಶ್ವಾಸ ಮೋಘೇಕರ್, ವಿಠ್ಠಲರಾವ ದೇಶಪಾಂಡೆ , ಆರ್ ಕೆ ಕುಲಕರ್ಣಿ, ಡಾ. ಸಂಜಯ್ ಕುಲಕರ್ಣಿ, ಸೇರಿದಂತೆ ಅನೇಕ ಭಕ್ತರು ಇದ್ದರು.