ನಂದಿನಿ ರಘೋಜಿಗೆ ಪ್ರಶಸ್ತಿ
ಕಲಬುರಗಿ : ಜು.18:ಶ್ರೀ ಬೀರ್ ದೇವ್ ಫೈನಾನ್ಸ್ ಪ್ರೈ. ಲಿಮಿಟೆಡ್‍ನ ನಿರ್ದೇಶಕಿ ನಂದಿನಿ ರಘೋಜಿ ಅವರಿಗೆ ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ರಾಜ್ಯ ಮಟ್ಟದ ವಾಸವಿ ಎಕ್ಸಲೆನ್ಸ್ ಪ್ರಶಸ್ತಿ
ಕಲಬುರಗಿ,ಜು.18-ಬೆಂಗಳೂರು ನಗರದ ಟೌನ್‍ಹಾಲ್ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ನಂದಿನಿ ಅವರ ಶೈಕ್ಷಣಿಕ ಸಾಧನೆ, ಕುಟುಂಬದ ಉದ್ದಿಮೆಗಳಲ್ಲಿ ಆಶಾದಾಯಕ ಬೆಳವಣಿಗೆ, ಶಿಕ್ಷಣ ಕ್ಷೇತ್ರದ ಸೇವೆ, ಸಮಾಜ ಸೇವೆ, ರೋ ಕ್ಟ್ ಕ್ಲಬ್ ಹಾಗೂ ಕೆಕೆಸಿಸಿಐ ನ ವುಮೆನ್ ಇಂಟಪ್ರ್ರಿನ್ಯರ್ಯಿಶಿಪ್‍ನ ಕ್ರಿಯಾಶೀಲ ಸದಸ್ಯೆಯಾಗಿ ನೀಡುತ್ತಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ, ಎನ್.ಎಸ್.ಶ್ರೀನಿವಾಸಮೂರ್ತಿ, ಹಿರಿಯ ಉಪಾಧ್ಯಕ್ಷರು ಕುಂಟನಾಳ ವೆಂಕಟೇಶ , ರಾಮಚಂದ್ರ ಡಿ.ರಘೋಜಿ, ಬಸಣಗೌಡ ಪಾಟೀಲ ಯತ್ನಾಳ ಶಾಸಕರು, ಸುಧಾ ಆರ್.ಪಿ. ರವಿಶಂಕರ, ಡಿ.ಎಸ್.ಅರುಣ ಸಂಸದರು, ಆರ್.ರವಿಕುಮಾರ ಮಹಾಸಭಾದ ಸಂಘಟನಾ ಕಾರ್ಯದರ್ಶಿ, ಕೆ.ಆರ್.ಕೃಷ್ಣಾ ಮಹಾಸಭಾದ ಪ್ರಧಾನ ಕಾರ್ಯದರ್ಶಿ, ವೀರೇಶ ವಾಘಣಗೇರಿ ಮಹಾಸಭಾದ ನಿರ್ದೇಶಕರು, ಕಲಬುರಗಿ ಸೇರಿದಂತೆ ಮಹಾಸಭಾದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.