ರಂಗಮಾಧ್ಯಮದಿಂದ “ರಂಗ ಸುವರ್ಣ” ಪ್ರಶಸ್ತಿ
ಕಲಬುರಗಿ:ಜು.18: ಕಲಬುರಗಿಯ ಹವ್ಯಾಸಿ ನಾಟಕ ಸಂಸ್ಥೆ ರಂಗಮಾಧ್ಯಮ ‘ಸುವರ್ಣ ಮಹೋತ್ಸವದ’ ಆಚರಣೆಯ ಸಂಭ್ರಮದಲ್ಲಿದೆ. 1974 ರಲ್ಲಿ ಶ್ರೀಯುತ ಗಿರಿಡ್ಡಿ ಗೋವಿಂದರಾಜ ಮತ್ತು ಶ್ರೀ ಚಂದ್ರಕಾಂತ ಕುಸುನೂರವರ ನೇತೃತ್ವದಲ್ಲಿ ಆರಂಭವಾದ ಸಂಸ್ಥೆ ಹಲವಾರು ಉತ್ತಮ ನಾಟಕಗಳನ್ನು ಪ್ರಯೋಗಿಸುವ ಮುಖೇನ ಕಲಬುರಗಿಯಲ್ಲಿ ‘ಹವ್ಯಾಸಿ ರಂಗಭೂಮಿಗೆ’ ನೆಲೆ ಕೊಡುವುದರ ಜತಜತೆಗೆ ‘ನಾಟಕದ ಪ್ರೇಕ್ಷಕ’ ವರ್ಗವನ್ನೂ ಬೆಳೆಸಿದ ಶ್ರೇಯಸ್ಸಿಗೆ ಪಾತ್ರವಾಗಿದೆ. ನಂತರದಲ್ಲಿ ಶ್ರೀ ಪ್ರಭಾಕರ ಸಾತಖೇಡ, ಶ್ರೀಧರರಾವ, ಸ್ವಾಮಿರಾವ ಕುಲಕರ್ಣಿ, ಹೇಮಂತ ಕೊಲ್ಲಾಪುರೆ ಅವರು ಸಂಸ್ಥೆಯ ಚಟುವಟಿಕೆಗಳನ್ನು ಸಮರ್ಥವಾಗಿ ನಡೆಸಿಕೊಂಡು ಬಂದರು. ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಕರಾವಳಿ ಉತ್ಸವ, ಗೋವಾದಲ್ಲಿ ‘ಗಡಿನಾಡ ಕನ್ನಡ ನಾಟಕಕೋತ್ಸವದಲ್ಲಿ ನಾಟಕ ಪ್ರದರ್ಶನಗಳನ್ನ ನೀಡಿದ ಹೆಮ್ಮೆ ರಂಗ ಮಾಧ್ಯಮ ಸಂಸ್ಥೆಯದ್ದು.
ಸುವರ್ಣ ಮಹೋತ್ಸವ ವರ್ಷಾಚರಣೆಯ ಪೂರ್ವಭಾವಿಯಾಗಿ ಹಲವಾರು ಸಾಂಸ್ಕøತಿಕ ಕಾರ್ಯಕ್ರಮ, ರಂಗ ಗೀತ ಗಾಯನ ಮತ್ತು ನಾಟಕ ಪ್ರದರ್ಶನಗಳನ್ನೂ ಹಮ್ಮಿಕೊಳ್ಳುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.
ರಂಗಮಾಧ್ಯಮದ ಹಿರಿಯ ಕಲಾವಿದರಾದ ಡಾ. ಸ್ವಾಮಿರಾವ ಕುಲಕರ್ಣಿ, ಮೋಹನ ಸೀತನೂರ, ಶಾಂತಾ ಭೀಮಶೇನರಾವ, ವಿಲಾಸ ಸಾತಖೇಡ, ಕೆ ಪಿ ಗಿರಿಧರ, ನಾರಾಯಣ ಕುಲಕರ್ಣಿ ಹಾಗು ಸಂಸ್ಥೆಯ ಇತರ ಸದಸ್ಯರು ಸಭೆ ಸೇರಿ, ರಂಗಮಾಧ್ಯಮದ ಸುವರ್ಣ ಮಹೋತ್ಸವ ವರ್ಷಾಚರಣೆಯ ಅಂಗವಾಗಿ “ರಂಗ ಸುವರ್ಣ” ಪ್ರಶಸ್ತಿ ಪ್ರದಾನ ಮಾಡುವ ನಿರ್ಧಾರ ಕೈಗೊಳ್ಳಲಾಯ್ತು. ಸಂಸ್ಥೆಯ ಹಿರಿಯ ಕಲಾವಿದರು ಹಾಗೂ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಹಿರಿಯರಿಗೆ ಪ್ರಶಸ್ತಿ ನೀಡಿ ಗೌರವಿಸುವ ನಿರ್ಣಯ ಕೈಗೊಳ್ಳಲಾಯಿತು.
ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಕೊಡುಗೆಯನ್ನು ಪರಿಗಣಿಸಿ ಈ ಕೆಳಗಿನ ಐದು ಜನ ಸಾಧಕರಿಗೆ “ರಂಗ ಸುವರ್ಣ” ಪ್ರಶಸ್ತಿ ಪ್ರದಾನ ಮಾಡಲು ನಿರ್ಧರಿಸಲಾಗಿದೆ.
ಪೆÇ್ರ. ವಿ.ಜಿ. ಅಂದಾನಿ, ಖ್ಯಾತ ಚಿತ್ರ ಕಲಾವಿದರು,
ಶ್ರೀ ಐ.ಎಸ್ ನವಲಿ, ಹಿರಿಯ ರಂಗ ಕಲಾವಿದರು,
ಶ್ರೀ ಸದಾನಂದ ಪೆರ್ಲ, ಪ್ರಸಾರ ಭಾರತಿಯ ನಿವೃತ್ತ ಅಧಿಕಾರಿಗಳು
ಶ್ರೀಮತಿ ಸಂಗೀತಾ (ಮಾನ್ವಿಕರ್) ಗುರುರಾಜ ಕುಲಕರ್ಣಿ, ರಂಗ ಕಲಾವಿದೆ, ಹೈದರಾಬಾದ.
ಮತ್ತು ಶ್ರೀ ಸಂಗಮನಾಥ ರೇವತಗಾವ, ಪತ್ರಕರ್ತರು ಹಾಗು ಸಾಹಿತಿಗಳು.
ಇದೇ ತಿಂಗಳು ದಿನಾಂಕ 24 ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ “ರಂಗ ಸುವರ್ಣ” ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗ ಮಾಧ್ಯಮ ಸಂಸ್ಥೆಯ ಸಂಘಟಕರಾದ ಶ್ರೀ ನಾರಾಯಣ ಕುಲಕರ್ಣಿ, ಸಾಹಿತಿ ಹಾಗು ನಟ- ನಿರ್ದೇಶಕ ಮತ್ತು ಶ್ರೀ ಕೆ.ಪಿ. ಗಿರಿಧರ, ರಂಗಕರ್ಮಿ ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.