ಭಾವೈಕ್ಯತೆಗೆ ಸಾಕ್ಷಿಯಾದ ಮೊಹರಂ ಹಬ್ಬ
ಅಫಜಲಪುರ:ಜು.18: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಕೂಡಿಕೊಂಡು ಮೊಹರಂ ಹಬ್ಬವನ್ನು ಅಲಾಯಿ ಕುಣಿತದೊಂದಿಗೆ ಸಂಭ್ರಮ, ಸಡಗರ, ಭಕ್ತಿ ಭಾವೈಕ್ಯತೆಯಿಂದ ಆಚರಿಸಿದರು.
ಅಫಜಲಪುರ ಪಟ್ಟಣದ ಹಲವು ಬಡಾವಣೆಗಳಲ್ಲಿ
ಪ್ರತಿಷ್ಠಾಪಿಸಲಾದ ಮೊಹರಂ ಹಬ್ಬದ ದೇವರುಗಳ ದಫನ್ ಕಾರ್ಯವು ಬುಧವಾರ ಸಂಜೆ ಆಜಾನ್ ಹಾಗೂ ಸೂರ್ಯಾಸ್ತದ ನಂತರ ಶಾಂತಿಯುತವಾಗಿ ಜರುಗಿತು.
ಮೊಹರಂ ಉತ್ಸವವು ಶಾಂತಿ ಮತ್ತು ಸುವ್ಯವಸ್ಥೆಯಿಂದ ಜರುಗಲು ಸಿಪಿಐ ಚೆನ್ನಯ್ಯ ಹಿರೇಮಠ ಮಾರ್ಗದರ್ಶನದಲ್ಲಿ
ಪಿಎಸ್‍ಐ ಸೋಮಲಿಂಗ ಒಡೆಯರ್ ನೇತೃತ್ವದ ತಂಡ ಸೂಕ್ತ ಭದ್ರತೆ ಒದಗಿಸಿದರು.