ಮೊಹರಂ ಆಚರಣೆ
ಲಕ್ಷ್ಮೇಶ್ವರ,ಜು18: ಪಟ್ಟಣದಲ್ಲಿ ಮೊಹರಂ ಹಬ್ಬದ ಕೊನೆಯ ದಿನ ಹಬ್ಬವನ್ನು ಹಿಂದು ಮುಸ್ಲಿಂ ಸಮುದಾಯದವರು ಒಗ್ಗೂಡಿ ಸಂಭ್ರಮದಿಂದ ಆಚರಣೆ ಮಾಡಿದರು. ಮೊಹರಂ ಹಬ್ಬದ ಹಿಂದಿನ ದಿನ ಖತಲ್ ರಾತ್ರಿಯ ದಿನ ದರ್ಗಾ ಗಳಿಗೆ ತೆರಳಿ ಸಕ್ಕರೆ ನೈವೇದ್ಯವನ್ನು ಮಾಡಿದ್ದರು.
ನಿನ್ನೆ ಅಂದರೆ ಬುಧುವಾರ ಪಟ್ಟಣದಲ್ಲಿನ 14 ಮೊಹಲ್ಲಾದ ಪಾಂಜಾಗಳು ಒಂದೆಡೆ ಸೇರಿದವು.
ದೂದ್ ಪಿರಾಂ ದರ್ಗಾ ಮಖಾನ್ ಗಲ್ಲಿ ಮೋನಾ ಮಸ್ಜಿದ್ ಸಿದ್ದಿ ಮೊಹಲ್ಲಾ ಮುಲ್ಲಾ ಮೊಹಲ್ಲಾ ಮಜೀದ್ ಮೊಹಲ್ಲಾ ರ ಕ್ಯಾ ಮೊಹಲ್ಲ ಶಿರಕಳ್ಳಿ ಮೊಹಲ್ಲ ಸಾಲ್ಗೇರಿ ಓಣಿ ಬಸ್ತಿ ಕೇರಿ ಜಾಮಿಯಾ ಮಸ್ಜಿದ್ ಚೋಟಿಯಲಂಕಾಪತಿ ಬಡಿಲಂಕಾ ಪತಿ, ಮೊಮ್ಮಿನ್ ಮೋಹಲ್ಲ ಸೇರಿದಂತೆ ಒಟ್ಟು 14 ಮೊಹಲ್ಲ ಪಾಂಜಾ ಗಳು ಪಾಲ್ಗೊಂಡಿದ್ದವು.
ಸಾವಿರಾರು ಜನರು ಶ್ರದ್ಧಾ ಭಕ್ತಿಯಿಂದ ಪಾಂಜಾ ಮೆರವಣಿಗೆ ವೀಕ್ಷಿಸಿದರು.