ಕರಾಟೆಯಲ್ಲಿ ಅಮೋಘ ಸಾಧನೆ
ವಿಜಯಪುರ:ಜು.18: ದಾವಣಗೇರಿಯಲ್ಲಿ ಕರ್ನಾಟಕ ಸ್ಪೋಟ್ಸ್ ಕರಾಟೆ ಸಂಸ್ಥೆಯ ವತಿಯಿಂದ ನಡೆದ ಮುಕ್ತ ಕರಾಟೆ ರಾಷ್ಟ್ರೀಯ ಚಾಂಪಿಯನ್ಶಿಫ್‍ನ ಪೈಟಿಂಗ ಮತ್ತು ಕಟಾ ವಿಭಾಗದಲ್ಲಿ ಎ.ಕೆ. ಡಾನ್ಸ್ ಮತ್ತು ಕರಾಟೆ ಅಕಾಡೆಮಿಯ ಕ್ರೀಡಾಪಟುಗಳು ಅಮೋಘ ಸಾಧನೆ ಮಾಡಿದ್ದಾರೆ.
ಕರಾಟೆಪಟುಗಳಾದ ದೇವರಾಜ, ಸೂರ್ಯಕಾಂತ, ಅಹ್ಮದಅಲಿ, ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಿರಾಜ, ಪೂಜಾ, ಪ್ರಜ್ವಲ, ಪ್ರೀತಮ, ಅಫ್ಜಲ್ ದ್ವಿತೀಯ ಸ್ಥಾನ ಹಾಗೂ ಪ್ರತೀಕ, ಸೋಮನಗೌಡ, ನೆಹರಿಕಾ, ಸುಮಿತ, ಅರವಿಂದ, ಪ್ರಿಯಂಕಾ, ಶಿಲ್ಪಾ, ಅಮರನಾಥ ತೃತೀಯ ಸ್ಥಾನ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ತರಬೇತುದಾರ ಆಕಾಶ ರಾಠೋಡ, ವ್ಯವಸ್ಥಾಪಕ ಅಹಮದಅಲಿ ಮುಲ್ಲಾ ಭಾಗವಹಿಸಿದ್ದರು.