ಡೆಂಘೀ: ಪಾಲಿಕೆ ಅಧಿಕಾರಿಗಳ ತುರ್ತು ಸಭೆಸ್ವಚ್ಚತೆ ಆದ್ಯತೆಗೆ ಸೂಕ್ತ ಕ್ರಮಕ್ಕೆ ಸೂಚನೆ
ವಿಜಯಪುರ,ಜು.18: ವಿಜಯಪುರ ಮಹಾನಗರಪಾಲಿಕೆಯ ಕೇಂದ್ರ ಕಛೇರಿಯಲ್ಲಿ ಬುಧವಾರ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಅವರ ಅಧ್ಯಕ್ಷತೆಯಲ್ಲಿ ಡೆಂಘೀ ಹಾಗೂ ನಗರ ಸ್ವಚ್ಚತೆ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ಪಾಲಿಕೆ ವಲಯ ಆಯುಕ್ತರು, ಆರೋಗ್ಯಧಿಕಾರಿಗಳು ಮತ್ತು ಮಹಾನಗರಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿ,ಸಿಬ್ಬಂದಿ, ಸಹಾಯಕ ಕಾರ್ಯಪಾಲಕ ಅಭಿಯಂತರರು(ಪರಿಸರ), ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ಮತ್ತು ನೈರ್ಮಲ್ಯ ಮೇಲ್ವಿಚಾರಕರುಗಳು ನೇತೃತ್ವದಲ್ಲಿ ಡೆಂಘೀ ಮತ್ತು ನಗರದ ಸ್ವಚ್ಚತೆ ಕುರಿತಂತೆ ನಡೆದ ತುರ್ತು ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಭೆಯಲ್ಲಿ ವಿಜಯಪುರ ಮಹಾನಗರಪಾಲಿಕೆಯ ವತಿಯಿಂದ ಸೊಳ್ಳೆಯಿಂದ ಹರಡುವ ಡೆಂಘೀ ಕಾಯಿಲೆ. ತಡೆಗಟ್ಟಲು ಪೂರ್ವಭಾವಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ನಗರ ಪ್ರದೇಶ ವಿವಿಧ ವಾರ್ಡಗಳಲ್ಲಿ ಧೂಮೀಕರಣ (ಈoggiಟಿg) ಮತ್ತು ಬೈ ಲಾರ್ವಾ ಸಿಂಪಡಣೆಯನ್ನು ಕೈಗೊಳ್ಳಲು ಆಗತ್ಯಕ್ರಮ ಕೈಗೊಳ್ಳುವ ಬಗ್ಗೆ ಎಲ್ಲಾ ಆರೋಗ್ಯ ನಿರೀಕ್ಷರುಗಳಿಗೆ ಸೂಚಿಸಲಾಯಿತು. ಈ ಕುರಿತಂತೆ ವಲಯ ಆಯುಕ್ತರು, ಆರೋಗ್ಯಧಿಕಾರಿಗಳು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು(ಪರಿಸರ), ಪರಿಸರ ಅಭಿಯಂತರರು ಇವರುಗಳು ಅಗತ್ಯ ಮೇಲ್ವಿಚಾರಣೆ ಕೈಗೊಳ್ಳಲು ಸಭೆಯಲ್ಲಿ ಸೂಚಿಸಲಾಯಿತು.
ನಗರದ ಸಾರ್ವಜನಿಕರುಗಳು ಮತ್ತು ವರ್ತಕರು ಸ್ವಚ್ಚತೆಯನ್ನು ಕಾಪಾಡುಕೊಳ್ಳವುದು ಕಸವನ್ನು ಕಡ್ಡಾಯವಾಗಿ ಕಸದ ವಾಹನಕ್ಕೆ ನೀಡುವುದು. ಹಾಗೆಯೇ ವಿಜಯಪುರ ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿನ ಸಾರ್ವಜನಿಕರುಗಳು ತಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹೂವಿನ ಕುಂಡಳ, ನೀರು ಶೇಖರಿಸಿಟ್ಟ ಬಕೇಟ್‍ಗಳಲ್ಲಿ, ಹಳೆಯದಾದ ಟೈರ್‍ಗಳಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗದಂತೆ ಕಟ್ಟುನಿಟ್ಟಾದ ಮುನ್ನೆಚ್ಚರಿಕೆಯನ್ನು ಕ್ರಮಗಳನ್ನು ವಹಿಸಿಕೊಂಡು ನಗರದಲ್ಲಿ ಡೆಂಘೀ ಜ್ವರ ಹರಡುವುದನ್ನು ತಡೆಗಟ್ಟಲು ಮತ್ತು ನಗರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಪಾಲಿಕೆಯೊಂದಿಗೆ ಸಾರ್ವಜನಿಕರುಗಳು ಸಹಕರಿಸಲು ಕೋರಲಾಯಿತು.
ಈ ನಿಟ್ಟಿನಲ್ಲಿ ಸಾರ್ವಜನಿಕರು ಮತ್ತು ವರ್ತಕರು ಡೆಂಘೀ ನಿಯಂತ್ರಣ ಹಾಗೂ ಮುಂಜಾಗೃತೆ ಕುರಿತಂತೆ ನಗರದ ಸ್ವಚ್ಛತೆ ಹಾಗೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಲು ಹಾಗೂ ಮನೆಯ ಸುತ್ತಲು ಯಾವುದೇ.ತರಹ ನೀರು ಶೇಖರಣೆಯಾಗದಂತೆ ಎಚ್ಚರಿಗೆ ವಹಿಸಲು ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ಸ್ವಚ್ಛತೆ ಕುರಿತು ಯಾವುದೇ ಉಲ್ಲಂಘನೆ ಪ್ರಕರಣಗಳು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾಕ್ರಮ ವಹಿಸಿ ಸೂಕ್ತ ದಂಡ ವಿಧಿಸಿಲಾಗುವುದು ಎಂದು ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರು ಎಚ್ಚರಿಕೆ ನೀಡಿದ್ದಾರೆ.