ವಿಜಯಪುರದಲ್ಲಿ ಮೊಹರಂ ಆಚರಣೆ: ಭಕ್ತಿಯ ಪರಾಕಾಷ್ಠೆ ಮೆರೆದ ಜನ
ವಿಜಯಪುರ,ಜು.18:ಐತಿಹಾಸಿಕ ಗುಮ್ಮಟ ನಗರಿ ವಿಜಯಪುರದಲ್ಲಿ ಮೊಹರಂ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.
ಕಳೆದ ಐದು ದಿನಗಳ ವರೆಗೆ ಪಂಜಾ ಹಾಗೂ ಡೋಲಿ ದೇವರನ್ನು ಪ್ರತಿಷ್ಠಾಪಿಸಿ, ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮುಸ್ಲಿಂ ಬಾಂಧವರು ಮೊಹರಂ ಹಬ್ಬವನ್ನು ಆಚರಿಸಲಾಯಿತು.
ಅನೇಕ ಭಕ್ತರು ಫಕೀರ, ಹುಲಿ ವೇಷ ಧರಿಸಿ ದೇವರಿಗೆ ತಮ್ಮ ಭಕ್ತಿಯ ಸೇವೆಗೈದರು. ಇನ್ನೂ ಕೆಲ ಕಡೆ ಮಸೀದೆ ಮುಂದಿನ ಅಲಾಯಿ ದೇವರ ಎದುರಿಗೆ ಅಗ್ನಿ ಕುಂಡ ನಿರ್ಮಿಸಿ ಕುಂಡದಲ್ಲಿನ ಅಗ್ನಿ ತುಳಿದು ಭಕ್ತಿಯ ಪರಾಕಾಷ್ಠೆ ಮೆರೆದರು.
ಬುಧವಾರ ಮೊಹರಂ ಕಡೆಯ ದಿನವಾಗಿದ್ದರಿಂದ ರಾತ್ರಿ ಪಂಜಾ ಹಾಗೂ ಡೋಲಿ ದೇವರ ಭವ್ಯ ಮೆರವಣಿಗೆ ನಡೆದು ನಗರದ ಮುಳ್ಳಗಸಿ ಬಳಿ ಅಲಾಯಿ ದೇವರನ್ನು ವಿಸರ್ಜಿಸುವ ಮೂಲಕ ಮೊಹರಂ ಹಬ್ಬ ಕೊನೆಗೊಂಡಿತು