ಭಕ್ತಿ ಶ್ರದ್ದೆಯಿಂದ ಮೊಹರಂ ಹಬ್ಬ ಆಚರಣೆ
ಮುನವಳ್ಳಿ,ಜು18: ದೂಪದಾಳ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಪ್ರತೀಕವಾದ ಗ್ರಾಮದ ಭಕ್ತರು ಭಕ್ತಿ ಭಾವದಿಂದ ಜಾತಿ ಭೇದ ಮರೆತು ಮೊಹರಂ ಆಚರಣೆಯಲ್ಲಿ ಪಾಲ್ಗೋಂಡು ಭಾವೈಕ್ಯೆತೆ ಮೆರೆದರು.
ಗ್ರಾಮದ ಹಿರಿಯರಾದ ರಾಕೇಶ ದೇಸಾಯಿ,ಮೋಹನ ಮೇಟಿ,ನಾಗಪ್ಪ ಹಿಟ್ಟಣಗಿ,ಇಸ್ಮಾಯಿಲ್ ಮುಜಾವರ,ನಿತ್ಯಾನಂದ ಹಿರೇಮಠ, ಇಮಾಮಸಾಬ ಇಮ್ಮನ್ನವರ, ದಿಲಾವರಸಾಬ ದಿನ್ನಿಮನಿ, ಶಿವಾನಂದ ದೊಡವಾಡ, ಹುಸೇನಸಾಬ ಮುಜಾವರ, ಪ್ರಕಾಶ ಪಾಶ್ಚಾಪೂರ,ಇಮಾಮಹುಸೇನ ದಿನ್ನಿಮನಿ,ಫಕೀರಪ್ಪ ಹಿಟ್ಟಣಗಿ,ಯಲ್ಲಪ್ಪ ಹಿಟ್ಟಣಗಿ, ಮಹಾದೇವ ಮಂಗಸೂಳಿ,ಧರೆಪ್ಪ ಶಿಂದೋಗಿ,ಹುಸೇನಸಾಬ ಇಮ್ಮನ್ನವರ,ಬಾಬಾಸಾಬ ದೊಡಮನಿ,ಬಸವರಾಜ ಬಡಿಗೇರ,ಪುಂಡಲೀಕ ಕುರಿ,ವಿಠ್ಠಲ ವಾಲಿಕಾರ,ನಾಗರಾಜ ಮೇಟಿ,ಕಲಂದರ ಬೈಲವಾಡ ಮತ್ತು ಭಕ್ತರೆಲ್ಲರು ಪಾಲ್ಗೊಂಡಿದ್ದರು. ಸಾಯಂಕಾಲ ಡೋಲಿ ಮತ್ತು ಪಾಂಜಾ ದೇವರುಗಳನ್ನು ನದಿಗೆ ಕರೆದೂಯ್ಯವ ಮೂಲಕ ಮೊಹರಂ ಹಬ್ಬ ಮುಕ್ತಾಯವಾಯಿತು.