ಕೊಟಗ್ಯಾಳ ಮೌಲಾಲಿ ಪೀರನ ಭವ್ಯ ಮೆರವಣಿಗೆ
ಭಾಲ್ಕಿ :ಜು.18:ತಾಲ್ಲೂಕಿನ ಕೊಟಗ್ಯಾಳ ಗ್ರಾಮದಲ್ಲಿ ಶ್ರದಾ ಭಕ್ತಿಯಿಂದ ಮೌಲಾಲಿ ಪೀರನ ಮೆರವಣಿಗೆ ಬುಧವಾರ ನಸುಕಿನ ಜಾವ ಅತಿ ವಿಜೃಂಭಣೆಯಿಂದ ಜರುಗಿತ್ತು.
ಸಾವಿರಾರು ಸಂಖ್ಯೆಯಲ್ಲಿ ಮೌಲಾಲಿ ಪೀರನ ಭಕ್ತರ ದಂಡು ಹರಿದುಬಂದು ಹರಕೆ ತಿರಿಸಿದರು. ರಾತ್ರಿ ಇಡೀ ಪೈತರಿ ನಡೆಯಿತ್ತು ಇದೇ ಸಂದರ್ಭದಲ್ಲಿ ಖ್ಯಾತ ಶಾಹೀರಗಳಾದ ಶಬೀರಮಿಯ್ಯ, ದತ್ತು ಕಾಂಬಳೆ, ಕಾಶಿನಾಥ ಕಾಂಬಳೆ ಮುಂತಾದವರು ಧಾರ್ಮಿಕ, ಸಾಮಾಜೀಕ, ಅಧ್ಯಾತ್ಮೀಕ ಅಲ್ಲದೇ ಸವಾಲ-ಜವಾಬ ಹಾಡುಗಳನ್ನು ಹಾಡಿ ನೆರೆದ ಸಭಿಕರ ಗಮನ ಸೆಳೆದರು ಅಲ್ಲದೇ
ಅಲ್ಲದೇ ಹತ್ತಾರು ಸಣ್ಣ ಸಣ್ಣ ನಗೆ ಹರಿಸುವ ನಾಟಕಗಳನ್ನು ದೀಲಿಪ ದವನಾಪೂರಗೆ, ವೀರಶೆಟ್ಟಿ ಬಿರಾದರ, ಶಿವಾನಂದ ಸ್ವಾಮಿ, ದತ್ತು ಹಂಗರಗೆ, ದಿಗಂಬರ್ ಬಂಗಾರಕಮಟೆ, ರಮೇಶ ಗಂದಗೆ, ಮಹೇಶ ಬಿರಾದರ, ಪಾಶುಮೀಯ್ಯಾ ಮುಂತಾದವರು ನಡೆಸಿಕೊಟ್ಟರು .
ಪೈತ್ರಿ ನಾಟಕ ಮುಂತಾದವುಗಳಿಗೆ ಸಂಗೀತ ಸೇವೆ ಮಲ್ಲಿಕಾರ್ಜುನ ಜೊನೆಕೇರಿ, ಗುಂಡಪ್ಪ ಜೊನಿಕೇರಿ, ಬಾಬುರಾವ ಜೊನಿಕೇರಿ ಇಡೀರಾತ್ರಿ ನಡೆಸಿದರು. ನಸುಕಿನ ಜಾವ ಮೌಲಾಲಿ ಪೀರನ ಮತ್ತು ಲಾಲ್ ಸಾಬ್ ಪೀರ್ ಭವ್ಯ ಮೆರವಣಿಗೆ ಆರಂಭವಾಯಿತ್ತು. ಮೆರವಣಿಗೆಯಲ್ಲಿ ಮದ್ದು ಗುಂಡುಗಳ ಸದ್ದು ಜೊರಾಗಿಯೇ ನಡೆಯಿತ್ತು. ಹೂ ಗಿಡ ಹಿಡಿದು ಯುವಕರ ಕುಣಿತ, ಲೇಜಿಂ ಮೂಲಕ ಯವಕರ ಪೈತ್ರಿ ಜರುಗಿತ್ತು.
ಮೌಲಾಲಿ ಪೀರನ ದರ್ಗಾದಿಂದ ಆರಂಭವಾದ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತ್ತು. ಮೊಗಲಪ್ಪ ಬೀರಗಿ, ಅಯೂಬ್ ಪೀರ ಹಿಡಿದಿದರು.
ಸಾವಿರಾರು ಸಂಖ್ಯೆಯಲ್ಲಿ ಭಕ್ತರದಂಡು ಹರಿದು ಬಂದಿತ್ತು. ಗ್ರಾಮದ ಪ್ರಮುಖರಾದ ಬಿ.ಎಸ್. ಮಾಲಿ ಪಾಟೀಲ್. ಮಲ್ಲಿಕಾರ್ಜುನ ಬಿರಾದರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ ಬಿರಾದರ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಕರಂಜೆ, ನಾಗಶೇಟ್ಟಿ ಬಿರಾದರ, ಸತೀಷ ಪಾಟೀಲ್, ರಮೇಶ ದದ್ದಾಪೂರೆ, ಮೊಗಲಪ್ಪ ಹುದಕಾರ, ಯಸುದಾಸ, ರಾಹುಲ್ ಕ್ರಾಂತಿಕಾರಿ, ರವೀಂದ್ರ ಕರಂಜೆ, ಕಂಟೆಪ್ಪ ಬಿರಾದರ, ನಜೀರಮಿಯ್ಯಾ, ರಾಜಕುಮಾರ ಹುಮನಾಬಾದೆ, ಚನ್ನಬಸಪ್ಪ ಬಿರಾದರ, ಗಣಪತಿ ಕರಂಜೆ ಮೊದಲಾದವರು ಇದ್ದರು.