ಕಾಮಗಾರಿಗೆ ಗುದ್ದಲಿ ಪೂಜೆ
ಚನ್ನಮ್ಮನ ಕಿತ್ತೂರು,ಜು18: ಸರ್ಕಾರ ಗ್ರಾಮಗಳ ಅಭಿವೃದ್ಧಿ ಕೆಲಸಗಳಿಗೆ ಹಣ ನೀಡುತ್ತಿದ್ದು ಅದನ್ನು ಸರಿಯಾಗಿ ಬಳಸಿಕೊಂಡು ಗ್ರಾಮಗಳ ಅಭಿವೃದ್ಧಿ ಮಾಡಬೇಕಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಲಕ್ಷ್ಮಣ ಚÀಲವಾದಿ ಹೇಳಿದರು.
ಮಲೆನಾಡು ಎಂಬ ಹೆಸರಿಗೆ ಖ್ಯಾತಿಯಾದ ಸಮೀಪದ ಖಾನಾಪೂರ ತಾಲೂಕ ಮಂಗೇನಕೊಪ್ಪ ಗ್ರಾಪಂ ವ್ಯಾಪ್ತಿಯ ವಿಠ್ಠಲ ದೇವರ ಓಣಿ ಸೇರಿದಂತೆ ಕಸಮಳಗಿ ಗ್ರಾಮದಲ್ಲಿಯ ವಿವಿಧ ಓಣಿಗಳ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜು ತಳವಾರ, ಗ್ರಾಪಂ ಉಪಾಧ್ಯಕ್ಷ ಉದಯ ಬಡಸ್ಕರ, ಸದಸ್ಯರುಗಳಾದ ಲಕ್ಷ್ಮೀ ಮಡ್ಡಿಮನಿ, ಅಶ್ವಿನಿ ಗೌಡ್ರ, ಜಗದೀಶ ಪಾಟೀಲ, ಸೋಮನಿಂಗ ಹೇರೆಕರ, ಈರಪ್ಪ ಹುಬ್ಬಳ್ಳಿ ಸಂಜೀವ ಚುಂಗಾಡಿ, ಲತಾ ಕಮ್ಮಾರ, ಲಕ್ಷ್ಮೀ ಸನದಿ, ಮಾಜಿ ತಾಪಂ ಸದಸ್ಯರು ಶಿವಾನಂದ ಚಲವಾದಿ, ಶಂಕರ ಮಡ್ಡಿಮನಿ, ಹಿರಿಯರಾದ ರಾಮಪ್ಪ ಹೇರೆಕರ, ರಮೇಶ ಪಾಟೀಲ, ಕೇದಾರಿ ನಂದಿಹಳ್ಳಿ, ಯಲ್ಲಪ್ಪ ಕುಂಡೆದಾರ, ಶಿವಾಜಿ ಗೌಡ್ರ, ನಿಂಗಪ್ಪ ಸತಬಣ್ಣವರ, ಬಸವರಾಜ ಬನೋಶಿ, ಸದೆಪ್ಪ ಪನಸುಂಡಕರ, ಕ್ಲರ್ಕ ಶೇಖರ ಪೇಜೋಳೆ, ಗ್ರಾಪಂ ಸಿಬ್ಬಂದಿ ಸೇರಿದಂತೆ ಇನ್ನುಳಿದವರಿದ್ದರು. ಕಾರ್ಯದರ್ಶಿ ಶಿವಾನಂದ ಜಂಡೇ ನಿರೂಪಿಸಿ ಸ್ವಾಗತಿಸಿದರು.